ವರ್ಷಾಂತ್ಯದಲ್ಲಿ ಕೆಂಪುಡುಗೆಯಲ್ಲಿ ಕಂಗೊಳಿಸುತ್ತಿರುವ ಈ ಬಾಲಿವುಡ್ ಬೆಡಗಿಯರು ಹೊಸ ವರ್ಷವಿಡೀ ನಿದ್ರೆಗೆಡಿಸಲಿದ್ದಾರೆ!!
ಪಟೌಡಿ ಮನೆತನದ ಕುಡಿ ಸಾರಾ ಅಲಿ ಖಾನ್ ಪ್ರವರ್ಧಮಾನಕ್ಕೆ ಬರುತ್ತಿರುವ ನಟಿಯಾದರೂ ಅದಾಗಲೇ ಜನಪ್ರಿಯತೆಯ ಶಿಖರ ತಲುಪಿದ್ದಾರೆ. ಅವರ ಈ ಫೋಟೋ ನೋಡಿ. ಕೆಂಪು ಪ್ಯಾಂಟ್ ಸೂಟಲ್ಲಿ ಅವರು ನಿಂತಿರುವ ಶೈಲಿಗೆ ಫಿದಾ ಆಗದಿರಲಾಗುತ್ತದೆಯೇ?
ಬಾಲಿವುಡ್ ಬೆಡಗಿಯರು ಕೆಂಪು ಉಡುಗೆಗಳಲ್ಲಿ ಮತ್ತಷ್ಟು ಚೆಂದುಳ್ಳಿ ಚೆಲುವೆಯರಾಗಿ ಕಾಣುತ್ತಾರೆ ಅಂತ ನಾವು ಇದಕ್ಕೆ ಮೊದಲು ಸಹ ಚರ್ಚೆ ಮಾಡಿದ್ದೆವು. ನೆನಪಿದೆ ತಾನೆ? ಈ ನಿಷ್ಕರುಣಿ ನಟಿಯರು ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭಗಳಲ್ಲಿ ನಮ್ಮನ್ನು ಗೋಳು ಹೊಯ್ದುಕೊಳ್ಳಲು ಪುನಃ ಕೆಂಪುಡುಗೆ ತೊಟ್ಟು ಕಂಗೊಳಿಸುತ್ತಿದ್ದಾರೆ. ಐವರು ಬೆಡಗಿಯರ ವಿಡಿಯೋ ನಮಗೆ ಲಭ್ಯವಾಗಿದ್ದು ಅದನ್ನು ನಿಮ್ಮೊಂದಿಗೆ ಶೇರ್ ಮಾಡಿಕೊಳ್ಳುತ್ತಿದ್ದೇವೆ. ಈ ಐವರಲ್ಲಿ ಅಂದರೆ, ಸಾರಾ ಅಲಿ ಖಾನ್, ಅನನ್ಯ ಪಾಂಡೆ, ದೀಪಿಕಾ ಪಡುಕೋಣೆ, ನೋರಾ ಫತೇಹಿ ಮತ್ತು ಕತ್ರೀನಾ ಕೈಫ್ ಯಾರೂ ನಮಗೆ ಅಪರಿಚಿರಲ್ಲ. ಇವರನ್ನು ಪ್ರತಿದಿನ ಒಂದಿಲ್ಲೊಂದು ಮಾಧ್ಯಮದಲ್ಲಿ ನೋಡುತ್ತಿರುತ್ತೇವೆ.
ನೋರಾ ಅದ್ಭುತವಾದ ಮೈಮಾಟ ಹೊಂದಿರುವ ನಟಿ. ಅರಸಿಕರಲ್ಲೂ ಕಿಚ್ಚು ಹೊತ್ತಿಸುವಂಥ ಅಂಗಸೌಷ್ಠವ ಈ ಕೆನಡಿಯನ್ ನೃತ್ಯಗಾತಿಯದ್ದು. ಇನ್ನು ಅವರು ಮೈಗೆ ಬಿಗಿದಪ್ಪಿದ ಮತ್ತು ತೊಡೆಭಾಗದವರೆಗೆ ಸೀಳು ಇರುವ ಕೆಂಪು ಗೌನಲ್ಲಿ ನಡೆದು ಬಂದರೆ ನಮ್ಮ ನಾಡಿ ಮತ್ತು ಹೃದಯ ಬಡಿತ ಅಂಕೆ ತಪ್ಪುವುದರಲ್ಲಿ ಸಂಶಯವೇ ಬೇಡ!
ಪಟೌಡಿ ಮನೆತನದ ಕುಡಿ ಸಾರಾ ಅಲಿ ಖಾನ್ ಪ್ರವರ್ಧಮಾನಕ್ಕೆ ಬರುತ್ತಿರುವ ನಟಿಯಾದರೂ ಅದಾಗಲೇ ಜನಪ್ರಿಯತೆಯ ಶಿಖರ ತಲುಪಿದ್ದಾರೆ. ಅವರ ಈ ಫೋಟೋ ನೋಡಿ. ಕೆಂಪು ಪ್ಯಾಂಟ್ ಸೂಟಲ್ಲಿ ಅವರು ನಿಂತಿರುವ ಶೈಲಿಗೆ ಫಿದಾ ಆಗದಿರಲಾಗುತ್ತದೆಯೇ? ಮಾಡರ್ನ್ ಔಟ್ ಫಿಟ್ನಲ್ಲಿ ಅವರ ಅಮಾಯಕ ನೋಟ ಅಪ್ಯಾಯಮಾನವೆನಿಸುತ್ತದೆ.
ಕನ್ನಡತಿ ದೀಪಿಕಾ ಪಡುಕೋಣೆ ಕಪ್ಪುಬಣ್ಣದ ಪ್ಯಾಂಟ್ ಮೇಲೆ ತುಂಬುಕತ್ತಿನ ಟಾಪ್ ಧರಿಸಿದ್ದಾರೆ. ಮಾಡ್ ಡ್ರೆಸ್ನಲ್ಲಿ ದೀಪಿಕಾ ಸೊಗಸಾಗಿ ಕಾಣುತ್ತಾರೆ ಅದರಲ್ಲಿ ಎರಡು ಮಾತಿಲ್ಲ; ಇನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ಅವರು ಅಪ್ಸರೆಯೇ. ಚಂಕಿ ಪಾಂಡೆ ಅವರ ಮಗಳು ಅನನ್ಯ ಪಾಂಡೆ ಕೆಂಪುಡುಗೆಯಲ್ಲಿ ರೆಡ್ ಹಾಟ್ ಆಗಿ ಕಾಣಿಸುತ್ತಿದ್ದಾರೆ.
ಮೊನ್ನೆಯಷ್ಟೇ ವಿಕ್ಕಿ ಕೌಶಲ್ ಅವರನ್ನು ಮದುವೆಯಾದ ಕತ್ರೀನಾ ಕೈಫ್ ಹನಿಮೂನ್ಗೆ ಹೋದಾಗ ತೆಗಿಸಿಕೊಂಡ ಪೋಟೋವೊಂದನ್ನು ಶೇರ್ ಮಾಡಿರುವಂತಿದೆ. ಕೆಂಪು ಸ್ವೆಟರ್ ಮತ್ತು ತಲೆ ಮೇಲೆ ಬೆಚ್ಚನೆಯ ಟೋಪಿ ಧರಿಸಿ ಮುದ್ದುಮುದ್ದಾಗಿ ಕೆಮೆರಾಗೆ ಪೋಸ್ ನೀಡಿದ್ದಾರೆ.
ಇದನ್ನೂ ಓದಿ: Viral Video: ನನ್ನನ್ನೂ ವಾಕಿಂಗ್ ಕರೆದುಕೊಂಡು ಹೋಗು; ಕಣ್ಣಲ್ಲೇ ಒಡೆಯನಿಗೆ ಮನವಿ ಮಾಡಿದ ನಾಯಿಯ ವಿಡಿಯೋ ವೈರಲ್