ಜಿಪ್ ಎಲೆಕ್ಟ್ರಿಕ್ ಕಂಪನಿಯ ವಹಿವಾಟು ಪ್ರಸಕ್ತ ಹಣಕಾಸು ವರ್ಷದಲ್ಲಿ 5 ಪಟ್ಟು ಹೆಚ್ಚಾಗಿದೆ!
ದೆಹಲಿ-ಎನ್ ಸಿ ಅರ್, ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ಪುಣೆ ನಗರಗಳಲ್ಲಿ ಗ್ರೋಸರಿ, ಔಷಧಿ, ಸಿದ್ಧ ಆಹಾರ ಮೊದಲಾದವುಗಳ ಆನ್ ಲೈನ್ ವ್ಯಾಪಾರ ನಡೆಸುವ ಪ್ರಮುಖ ಕಂಪನಿಗಳೊಂದಿಗೆ ಜಿಪ್ ಎಲೆಕ್ಟ್ರಿಕ್ ಒಪ್ಪಂದ ಮಾಡಿಕೊಂಡಿದ್ದು ಅವುಗಳಿಗೋಸ್ಕರ ಮಾತ್ರ ವಾಹನಗಳನ್ನು ಉತ್ಪಾದಿಸುತ್ತದೆ.
ಕಳೆದ ವರ್ಷ ರೂ. 5 ಕೋಟಿ ವಹಿವಾಟು ನಡೆಸಿದ್ದ ಇಲೆಕ್ಟ್ರಿಕ್ ಸ್ಕೂಟರ್ಗಳನ್ನು ಉತ್ಪಾದಿಸುವ ಜಿಪ್ ಇಲೆಕ್ಟ್ರಿಕ್ ಸಂಸ್ಥೆಯು ಸದರಿ ಹಣಕಾಸು ವರ್ಷದಲ್ಲಿ ತನ್ನ ವಹಿವಾಟು 5 ಪಟ್ಟು ಅಧಿಕಗೊಂಡು ರೂ. 25 ಕೋಟಿ ತಲುಪಲಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದೆ. ಕೊನೆ-ಮೈಲಿ ಗ್ರಾಹಕನಿಗೂ ಡೆಲಿವರಿ ತಲುಪಬೇಕು ಎಂಬ ದ್ಯೇಯದೊಂದಿಗೆ ಸ್ಕೂಟರ್ಗಳ ಉತ್ಪಾದನೆಯಲ್ಲಿ ತೊಡಗಿರುವ ಕಂಪನಿಯು ಸದ್ಯಕ್ಕೆ ಕೇವಲ ಇ-ಕಾಮರ್ಸ್ ಸಂಸ್ಥೆಗಳಿಗೆ ಮಾತ್ರ ವಾಹನಗಳನ್ನು ತಯಾರಿಸಿ ಕೊಡುತ್ತಿದೆ. 2022 ರಲ್ಲಿ ಕನಿಷ್ಟ ಒಂದು ಲಕ್ಷ ಸ್ಕೂಟರ್ಗಳನ್ನು ತಯಾರು ಮಾಡುವ ಗುರಿಯನ್ನು ಕಂಪನಿ ಹೊಂದಿದೆ ಅಂತ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ದೆಹಲಿ-ಎನ್ ಸಿ ಅರ್, ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ಪುಣೆ ನಗರಗಳಲ್ಲಿ ಗ್ರೋಸರಿ, ಔಷಧಿ, ಸಿದ್ಧ ಆಹಾರ ಮೊದಲಾದವುಗಳ ಆನ್ ಲೈನ್ ವ್ಯಾಪಾರ ನಡೆಸುವ ಪ್ರಮುಖ ಕಂಪನಿಗಳೊಂದಿಗೆ ಜಿಪ್ ಎಲೆಕ್ಟ್ರಿಕ್ ಒಪ್ಪಂದ ಮಾಡಿಕೊಂಡಿದ್ದು ಅವುಗಳಿಗೋಸ್ಕರ ಮಾತ್ರ ವಾಹನಗಳನ್ನು ಉತ್ಪಾದಿಸುತ್ತದೆ.
2017ರಲ್ಲಿ ಅಸ್ತಿತ್ವಕ್ಕೆ ಬಂದ ಗುರುಗ್ರಾಮ್ ಮೂಲದ ಜಿಪ್ ಇಲೆಕ್ಟ್ರಿಕ್ ಸ್ಟಾರ್ಟಪ್ ಈ ವರ್ಷ ಸೆಪ್ಟೆಂಬರ್ ನಲ್ಲಿ ಸಿರೀಸ್-ಎ ಫಂಡಿಂಗ್ ರೌಂಡ್ನಲ್ಲಿ ಸುಮಾರು ರೂ. 52 ಕೋಟಿಗಳಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆದಿದೆ.
ಒಂದು ಅಂದಾಜಿನ ಪ್ರಕಾರ ದೆಹಲಿ-ಎನ್ ಸಿ ಅರ್ ಪ್ರದೇಶದಲ್ಲಿ ಜಿಪ್ ಕಂಪನಿಯು 5,000 ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಹೊಂದಿದ್ದು ಮುಂದಿನ 18 ತಿಂಗಳಲ್ಲಿ ಭಾರತದ ಪ್ರಮುಖ 10 ನಗರಗಳಲ್ಲಿ ಸುಮಾರು ಒಂದು ಲಕ್ಷ ಇವಿಗಳನ್ನು ಬಿಡುಗಡೆ ಮಾಡುವ ಉದ್ದೇಶ ಕಂಪನಿ ಹೊಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದಲ್ಲದೆ, ಕಂಪನಿಯು ಹಿಂದಿನ ಹಣಕಾಸು ವರ್ಷದಲ್ಲಿ ಆಂತರಿಕ ದಹನಕಾರಿ ಇಂಜಿನ್‌ಗಳಿಂದ 1.1 ದಶಲಕ್ಷಕ್ಕೂ ಹೆಚ್ಚು ಸಾಗಣೆಗಳನ್ನು ಎಲೆಕ್ಟ್ರಿಕ್‌ಗೆ ಪರಿವರ್ತಿಸಿದೆ ಮತ್ತು ಮಾರ್ಚ್ 2022 ರ ವೇಳೆಗೆ 40 ಲಕ್ಷ ಮಾಲಿನ್ಯ-ಮುಕ್ತ ವಿತರಣೆಗಳನ್ನು ಮಾಡುವ ಯೋಜನೆ ರೂಪಿಸಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಕಂಪನಿಯ ಕೋರ್ ತಂಡದ ಸದಸ್ಯರ ಸಂಖ್ಯೆಯಲ್ಲು ಮೂರು ಪಟ್ಟು ಹೆಚ್ಚಳವಾಗಿದ್ದು 50ರಿಂದ 150ಕ್ಕೆ ತಲುಪಿದೆ ಎಂದು ಹೇಳಿಕೆ ತಿಳಿಸುತ್ತದೆ.
ಇದನ್ನೂ ಓದಿ: Watch ಸರ್ಬಿಯಾದಲ್ಲಿನ ಪಾಕಿಸ್ತಾನದ ರಾಯಭಾರ ಕಚೇರಿಯಿಂದ ಪಾಕ್ ಪಿಎಂ ಇಮ್ರಾನ್ ಖಾನ್ ಟ್ರೋಲ್ ವಿಡಿಯೊ ಟ್ವೀಟ್

ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ

ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್

ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ

ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
