Watch ಸರ್ಬಿಯಾದಲ್ಲಿನ ಪಾಕಿಸ್ತಾನದ ರಾಯಭಾರ ಕಚೇರಿಯಿಂದ ಪಾಕ್ ಪಿಎಂ ಇಮ್ರಾನ್ ಖಾನ್​​ ಟ್ರೋಲ್ ವಿಡಿಯೊ ಟ್ವೀಟ್

Imran Khan ಸರ್ಬಿಯಾದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಈ ವಿಡಿಯೊವನ್ನು ಟ್ವೀಟ್ ಮಾಡಿ  ಕ್ಷಮಿಸಿ, ಇಮ್ರಾನ್ ಖಾನ್ ನಮ್ಮಲ್ಲಿ ಇನ್ನೊದು ಆಯ್ಕೆ ಉಳಿದಿಲ್ಲ ಎಂದು ಟ್ವೀಟ್ ಮಾಡಿದ್ದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ.

Watch  ಸರ್ಬಿಯಾದಲ್ಲಿನ ಪಾಕಿಸ್ತಾನದ ರಾಯಭಾರ ಕಚೇರಿಯಿಂದ ಪಾಕ್ ಪಿಎಂ ಇಮ್ರಾನ್ ಖಾನ್​​ ಟ್ರೋಲ್ ವಿಡಿಯೊ ಟ್ವೀಟ್
ಇಮ್ರಾನ್ ಖಾನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 03, 2021 | 5:19 PM

ದೆಹಲಿ: ಪಾಕಿಸ್ತಾನದ (Pakistan) ಪ್ರಧಾನಿ ಇಮ್ರಾನ್ ಖಾನ್ (Imran Khan) ಟ್ವಿಟರ್​ನಲ್ಲಿ ಮುಜುಗರಕ್ಕೊಳಗಾಗಿದ್ದಾರೆ. ಅದೇನಪ್ಪಾ ಅಂದರೆ ಸರ್ಬಿಯಾದಲ್ಲಿನ (Serbia) ಪಾಕಿಸ್ತಾನದ ರಾಯಭಾರ ಕಚೇರಿಯ ಅಧಿಕೃತ ಟ್ವಿಟರ್ ಹ್ಯಾಂಡಲ್​​ನಲ್ಲಿ ಇಮ್ರಾನ್ ಖಾನ್ ಅವರನ್ನು ಅಣಕಿಸುವ ವಿಡಿಯೊ ಪೋಸ್ಟ್ ಆಗಿದೆ. “ಹಣದುಬ್ಬರವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವುದರೊಂದಿಗೆ, ನಾವು ಸರ್ಕಾರಿ ಅಧಿಕಾರಿಗಳುಗಳು ಕಳೆದ 3 ತಿಂಗಳಿಂದ ವೇತನವಿಲ್ಲದೆ ಮೌನವಾಗಿದ್ದು ನಿಮಗಾಗಿ ಕೆಲಸ ಮಾಡುವುದನ್ನು ಎಲ್ಲಿಯವರಿಗೆ ನಿರೀಕ್ಷೀಸುತ್ತೀರಿ ಇಮ್ರಾನ್ ಖಾನ್ ? ಶುಲ್ಕ ಪಾವತಿ ಮಾಡದೆ ನಮ್ಮ ಮಕ್ಕಳು ಶಾಲೆಯಿಂದ ಬಲವಂತವಾಗಿ ಶಾಲೆಯಿಂದ ಹೊರಗುಳಿಯುತ್ತಾರೆ. ಇದೇನಾ ಹೊಸ ಪಾಕಿಸ್ತಾನ? ಎಂಬ ಸಾಲುಗಳ ಜತೆ ಆಪ್ ನೇ ಗಬರಾನಾ ನಹೀ (ನೀವು ಭಯಪಡ ಬೇಡಿ) ಎಂದು ಹೇಳುವ ಇಮ್ರಾನ್ ಖಾನ್ ಮಾತಿನೊಂದಿಗೆ ಸೇರಿಸಿ ಮಾಡಿದ ರ್ಯಾಪ್ ಸಾಂಗ್ ವಿಡಿಯೊದಲ್ಲಿದೆ. ಸೆರ್ಬಿಯಾದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಈ ವಿಡಿಯೊವನ್ನು ಟ್ವೀಟ್ ಮಾಡಿ  ಕ್ಷಮಿಸಿ, ಇಮ್ರಾನ್ ಖಾನ್ ನಮ್ಮಲ್ಲಿ ಇನ್ನೊದು ಆಯ್ಕೆ ಉಳಿದಿಲ್ಲ ಎಂದು ಟ್ವೀಟ್ ಮಾಡಿದ್ದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ. ಈ ಟ್ವೀಟ್ ಈಗ ಡಿಲೀಟ್ ಆಗಿದ್ದು ಸ್ಕ್ರೀನ್ ಶಾಟ್ ಇಲ್ಲಿದೆ.

ನಿವೃತ್ತ ಮೇಜರ್ ಜನರಲ್ ಹರ್ಷ ಕಾಕರ್ ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

ಕಾಮೆಂಟ್‌ಗಳ ವಿಭಾಗದಲ್ಲಿ, ಈ ಹ್ಯಾಂಡಲ್ ಅನ್ನು ಯಾರು ನಡೆಸುತ್ತಿದ್ದಾರೆ ಮತ್ತು ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಎಂದು ಹಲವರು ಕೇಳಿದರು. ಆದರೂ, ಟ್ವೀಟ್‌ಗಳನ್ನು ಪೋಸ್ಟ್ ಮಾಡಿದವರು ಹತಾಶೆಯ ಕ್ರಿಯೆ ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ. ಈ ಟ್ವೀಟ್‌ಗೆ ಪಾಕಿಸ್ತಾನದ ಯಾವುದೇ ಸರ್ಕಾರಿ ಅಧಿಕಾರಿ ಇನ್ನೂ ಪ್ರತಿಕ್ರಿಯಿಸಿಲ್ಲ.

“ಈ ಖಾತೆಯನ್ನು ನಿಯಂತ್ರಿಸುವ ವೈಯಕ್ತಿಕ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದು ತಮಾಷೆ ಅಲ್ಲ. ಇದು ಪಾಕಿಸ್ತಾನವನ್ನು ಪ್ರತಿನಿಧಿಸುವ ಅಧಿಕೃತ ಪುಟವಾಗಿದೆ.”ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

ಅಕ್ಟೋಬರ್‌ನಲ್ಲಿ ಪಾಕಿಸ್ತಾನದಲ್ಲಿ ಕಳೆದ ಮೂರು ವರ್ಷಗಳಿಂದ ಹಣದುಬ್ಬರವು ಕಳೆದ 70 ವರ್ಷಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ವರದಿಯಾಗಿದೆ, ಇದು ವಿರೋಧ ಪಕ್ಷಗಳ ಪ್ರತಿಭಟನೆಗೆ ಕಾರಣವಾಯಿತು. ಆಹಾರ ಪದಾರ್ಥಗಳ ಬೆಲೆ ದ್ವಿಗುಣಗೊಂಡಿದ್ದು, ತುಪ್ಪ, ಎಣ್ಣೆ, ಸಕ್ಕರೆ, ಹಿಟ್ಟು ಮತ್ತು ಕೋಳಿ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. “ದೇಶವು ಹಣದುಬ್ಬರ, ಆರ್ಥಿಕ ವಿನಾಶ ಮತ್ತು ನಿರುದ್ಯೋಗಕ್ಕೆ ಬೆಲೆ ತೆರುತ್ತಿದೆ.  ಬಡವರು ಮಾತ್ರವಲ್ಲದೆ ಬಿಳಿ ಕಾಲರ್ ಉದ್ಯೋಗಗಳನ್ನು ಹೊಂದಿರುವವರು ಸಹ ಇದರಿಂದ ಕಂಗೆಟ್ಟಿದ್ದಾರೆ ಎಂಬ ಅರಿವು ಸರ್ಕಾರಕ್ಕೆ ಇಲ್ಲ” ಎಂದು ವಿರೋಧ ಪಕ್ಷವಾದ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್. ) ಮುಖ್ಯಸ್ಥ ಶಹಬಾಜ್ ಷರೀಫ್ ಹೇಳಿದ್ದಾರೆ.

ಇದನ್ನೂ ಓದಿ: ಈ ರಾಜ್ಯಗಳಲ್ಲಿ ಲಸಿಕೆ ಹಾಕದವರಿಗೆ ಉಚಿತ ಕೊವಿಡ್ ಚಿಕಿತ್ಸೆ ಇಲ್ಲ, ಪಡಿತರ ಮತ್ತು ಪಿಂಚಣಿಯೂ ಸಿಗಲ್ಲ; ಯಾವ ರಾಜ್ಯ ಯಾವ ರೀತಿಯ ಕ್ರಮ ಕೈಗೊಂಡಿದೆ?

Published On - 5:17 pm, Fri, 3 December 21

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು