ಬಿಸಿಲು ಮತ್ತು ಅನಾರೋಗ್ಯ ಲೆಕ್ಕಿಸದೆ ಶಿವಮೊಗ್ಗದಲ್ಲಿ ಪತ್ನಿಯ ಯಶಸ್ಸಿಗಾಗಿ ಶ್ರಮಿಸುತ್ತಿರುವ ಶಿವ ರಾಜಕುಮಾರ್

|

Updated on: Apr 09, 2024 | 5:02 PM

ಕೆಲ ಮಕ್ಕಳು ಅವರೊಂದಿಗೆ ಮಾತಾಡಲು, ಕೈಕುಲುಕಲು ಬರುತ್ತವೆ. ಶಿವ ರಾಜಕುಮಾರ್ ಒಂದಿಷ್ಟೂ ಬೇಸರ ಮಾಡಿಕೊಳ್ಳದೆ ಅವರೊಂದಿಗೆ ಮಾತಾಡುತ್ತಾರೆ ಮತ್ತು ಒಬ್ಬ ಪುಟಾಣಿಗೆ ಅವನ ಕೈಲಿದ್ದ ಶೇಡ್ಸ್ ತೆಗೆದುಕೊಂಡು ಅವನ ಕಣ್ಣಿಗೆ ಹಾಕಿ ಕೆಮೆರಾಗೆ ಪೋಸ್ ಕೊಡುವಂತೆ ಹೇಳುತ್ತಾರೆ. ಬಿಸಲಿನ ಧಗೆ, ಅನಾರೋಗ್ಯ ಮತ್ತು ಬಳಲಿಕೆಯಲ್ಲೂ ಶಿವರಾಜಕುಮಾರ್ ಪತ್ನಿಯ ಯಶಸ್ಸಿಗೆ ಶ್ರಮಿಸುತ್ತಿರುವುದು ಬೇರೆಯವರಿಗೆ ಮಾದರಿ.

ಶಿವಮೊಗ್ಗ: ಇವತ್ತು ಹಬ್ಬ ಅಂದ್ರೆ ಹಬ್ಬ ಆದರೆ ಸ್ಯಾಂಡಲ್ ವುಡ್ ನಟ ಶಿವ ರಾಜಕುಮಾರ್ (Shiva Rajkumar) ದಂಪತಿಹೆ ಜನರ ನಡುವೆ ಇರೋದೇ ಹಬ್ಬ! ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ (Shivamogga LS seat) ಸ್ಪರ್ಧಿಸಿರುವ ಗೀತಾ ಶಿವ ರಾಜಕುಮಾರ್ (Geetha Shiva Rajkumar) ಅವರನ್ನು ಗೆಲ್ಲಿಸಲೇಬೆಕೆಂಬ ಛಲ ಶಿವ ರಾಜಕುಮಾರ್ ತೊಟ್ಟಂತಿದೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ ಕಳೆದೆರಡು ದಿನಗಳಿಂದ ಅನಾರೋಗ್ಯದಲ್ಲಿದ್ದ ಶಿವಣ್ಣ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಮೊದಲೇ ಪತ್ನಿಯ ಪರ ಪ್ರಚಾರಕ್ಕಿಳಿದಿದ್ದಾರೆ. ಅವರ ಮುಖದಲ್ಲಿ ಆಯಾಸ ಮತ್ತು ಬಳಲಿಕೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಪ್ರಾಯಶಃ ಅದನ್ನು ಹಿಮ್ಮೆಟ್ಟಸಲೆಂದೇ ವೇದಕೆಯ ಮೇಲೆ ಗೀತಾ ಅವರೊಂದಿಗೆ ಎಡೆಬಿಡದೆ ಮಾತಾಡುತ್ತಿರಬಹುದು! ಕೆಲ ಮಕ್ಕಳು ಅವರೊಂದಿಗೆ ಮಾತಾಡಲು, ಕೈಕುಲುಕಲು ಬರುತ್ತವೆ. ಶಿವ ರಾಜಕುಮಾರ್ ಒಂದಿಷ್ಟೂ ಬೇಸರ ಮಾಡಿಕೊಳ್ಳದೆ ಅವರೊಂದಿಗೆ ಮಾತಾಡುತ್ತಾರೆ ಮತ್ತು ಒಬ್ಬ ಪುಟಾಣಿಗೆ ಅವನ ಕೈಲಿದ್ದ ಶೇಡ್ಸ್ ತೆಗೆದುಕೊಂಡು ಅವನ ಕಣ್ಣಿಗೆ ಹಾಕಿ ಕೆಮೆರಾಗೆ ಪೋಸ್ ಕೊಡುವಂತೆ ಹೇಳುತ್ತಾರೆ. ಬಿಸಲಿನ ಧಗೆ, ಅನಾರೋಗ್ಯ ಮತ್ತು ಬಳಲಿಕೆಯಲ್ಲೂ ಶಿವರಾಜಕುಮಾರ್ ಪತ್ನಿಯ ಯಶಸ್ಸಿಗೆ ಶ್ರಮಿಸುತ್ತಿರುವುದು ಬೇರೆಯವರಿಗೆ ಮಾದರಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Geetha Shivarajkumar: ಹೊಸಪೇಟೆ – ಅಪ್ಪು ಕನಸಿನ ಶಕ್ತಿಧಾಮದ ಮೂಲಕ ಮತ್ತೊಂದು ಶಾಲೆ ದತ್ತು, ಇಂಗಳಗಿ ಶಾಲೆ ದತ್ತು ಪಡೆದ ಗೀತಾ ಶಿವರಾಜಕುಮಾರ್