ಪತ್ನಿ ಹಾಗೂ ಮಗಳು ಇಸ್ರೇಲ್​ನಲ್ಲಿದ್ದರೂ ದಾವಣಗೆರೆಯ ನಿವೃತ್ತ ಶಿಕ್ಷಕ ನಿಶ್ಚಿಂತೆಯಿಂದ ಇದ್ದಾರೆ!

ಪತ್ನಿ ಹಾಗೂ ಮಗಳು ಇಸ್ರೇಲ್​ನಲ್ಲಿದ್ದರೂ ದಾವಣಗೆರೆಯ ನಿವೃತ್ತ ಶಿಕ್ಷಕ ನಿಶ್ಚಿಂತೆಯಿಂದ ಇದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 12, 2023 | 10:40 AM

ಪ್ರತಿದಿನ ಅವರ ಪತ್ನಿ ಫೋನ್ ಮಾಡಿ ಅಲ್ಲಿಯ ವಿದ್ಯಮಾನಗಳ ಬಗ್ಗೆ ಹೇಳುತ್ತಿರುತ್ತಾರಂತೆ. ಸಂಭಾಷಣೆ ನಡೆಯುವಾಗ ಬಾಂಬ್ ಸಿಡಿಯುವ ಸದ್ದು, ಯುದ್ಧ ವಿಮಾನಗಳ ಹಾರಾಟದ ಶಬ್ದ, ಯುದ್ಧ ಟ್ಯಾಂಕರ್ ಗಳು ಮೂವ್ ಆಗುವ ಸಪ್ಪಳ ಶಿಕ್ಷಕರಿಗೆ ಕೇಳಿಸುತ್ತಿರುತ್ತದಂತೆ. ವಾಪಸ್ಸು ಬಂದುಬಿಡುವಂತೆ ಇವರು ಪತ್ನಿಗೆ ತಿಳಿಸಿದ್ದು ಎಂಬಿಎ ಓದಬೇಕೆಂದಿರುವ ಮಗಳಿಗೆ ಭಾರತಕ್ಕೆ ಬಂದು ಇಲ್ಲೇ ವ್ಯಾಸಂಗ ಮಾಡುವಂತೆ ಹೇಳಿದ್ದಾರೆ.

ದಾವಣಗೆರೆ: ಬದುಕು ಅರಸಿಕೊಂಡು ಇಸ್ರೇಲ್ ಗೆ (Israel) ಹೋಗಿರುವ ಭಾರತೀಯರ ಸ್ವದೇಶದಲ್ಲಿರುವ ಕುಟುಂಬಗಳು ಅಲ್ಲಿ ಯುದ್ಧ ಶುರುವಾದ ಬಳಿಕ ವಿಪರೀತ ಆತಂಕದಲ್ಲಿರೋದು ಸತ್ಯ. ಆದರೆ ದಾವಣಗೆರೆ ಈ ನಿವೃತ್ತ ಶಿಕ್ಷಕರು (retired teacher) ಮಾತ್ರ ತಮ್ಮ ಪತ್ನಿ ಹಾಗೂ ಮಗಳು ಇಸ್ರೇಲ್ ರಾಜಧಾನಿ ಟೆಲ್ ಅವೀವ್ ನಲ್ಲಿದ್ದರೂ (Tel Aviv) ನಿರಾತಂಕವಾಗಿದ್ದಾರೆ. ಅವರ ಪತ್ನಿ ಸುಮಾರು ಒಂದು ದಶಕದಿಂದ ಅಲ್ಲಿದ್ದಾರೆ ಮತ್ತು 2022 ರಲ್ಲಿ ಮಗಳು ಸಹ ಅಲ್ಲಿಗೆ ಹೋಗಿದ್ದಾರೆ. ಶಿಕ್ಷಕರು ಹೇಳುವ ಹಾಗೆ, ಅವರ ಪತ್ನಿ ಮತ್ತು ಮಗಳು ಯುದ್ಧ ನಡೆಯುತ್ತಿರುವ ಪ್ರದೇಶದಿಂದ ಸುಮಾರು 150 ಕಿಮೀ ದೂರದಲ್ಲಿರುವುದರಿಂದ ಅತ್ಯಂತ ಸುರಕ್ಷಿತವಾಗಿದ್ದಾರೆ. ಪ್ರತಿದಿನ ಅವರ ಪತ್ನಿ ಫೋನ್ ಮಾಡಿ ಅಲ್ಲಿಯ ವಿದ್ಯಮಾನಗಳ ಬಗ್ಗೆ ಹೇಳುತ್ತಿರುತ್ತಾರಂತೆ. ಸಂಭಾಷಣೆ ನಡೆಯುವಾಗ ಬಾಂಬ್ ಸಿಡಿಯುವ ಸದ್ದು, ಯುದ್ಧ ವಿಮಾನಗಳ ಹಾರಾಟದ ಶಬ್ದ, ಯುದ್ಧ ಟ್ಯಾಂಕರ್ ಗಳು ಮೂವ್ ಆಗುವ ಸಪ್ಪಳ ಶಿಕ್ಷಕರಿಗೆ ಕೇಳಿಸುತ್ತಿರುತ್ತದಂತೆ. ವಾಪಸ್ಸು ಬಂದುಬಿಡುವಂತೆ ಇವರು ಪತ್ನಿಗೆ ತಿಳಿಸಿದ್ದು ಎಂಬಿಎ ಓದಬೇಕೆಂದಿರುವ ಮಗಳಿಗೆ ಭಾರತಕ್ಕೆ ಬಂದು ಇಲ್ಲೇ ವ್ಯಾಸಂಗ ಮಾಡುವಂತೆ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ