ಕನ್ನಡತಿ ಜೆನಿಲಿಯಾ ಬಹುಭಾಷಾ ತಾರೆಯಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ ಕೇವಲ ಒಂದೇ ಕನ್ನಡ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ

ಜೆನಿಲಿಯಾ 2003 ರಲ್ಲಿ ‘ತುಜೆ ಮೇರಿ ಕಸಮ್’ ಹೆಸರಿನ ಹಿಂದಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟು ಆ ಭಾಷೆ ಸೇರಿದಂತೆ ಅನೇಕ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಅಲ್ಲದೆ ಮರಾಠಿ ಚಿತ್ರಗಳಲ್ಲೂ ನಟಿಸಿದ್ದಾರೆ.

ಜೆನಿಲಿಯಾ ಡಿಸೋಜಾ ದೇಶ್ಮುಖ್ ಅಸಲಿಗೆ ಕನ್ನಡದರು ಅಂತ ಬಹಳ ಜನಕ್ಕೆ ಗೊತ್ತಿರಲಾರದು. ಆದರೆ ಅವರು ಹುಟ್ಟಿದ್ದು ಬೆಳೆದಿದ್ದು ಓದಿದ್ದು ವೃತ್ತಿಬದುಕು ಆರಂಭಿಸಿದ್ದು ಮದುವೆಯಾಗಿ ಎರಡೆರಡು ಮಕ್ಕಳನ್ನು ಹೆತ್ತು ಪತಿ ರೀತೇಶ್ 2000 ಇಸ್ವಿಯ ಅರಂಭಿಕ ವರ್ಷಗಳಲ್ಲಿ ನೀವು ಪಾರ್ಕರ್ ಪೆನ್ನಿನ ಜಾಹೀರಾತನ್ನು ನೋಡಿರಬಹುದು. ಅದರಲ್ಲಿ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಒಬ್ಬ ಕಾಲೇಜಿ ವಿದ್ಯಾರ್ಥಿನಿಯಾಗಿ ಅಟೋಗ್ರಾಫ್ ಕೇಳಿದ್ದು ಇದೇ ಜೆನಿಲಿಯಾ. ಪ್ರಾಯಶಃ ಅವರಿಗೆ ಕನ್ನಡ ಮಾತಾಡುವುದು ಬರಲಿಕ್ಕಲ್ಲ, ಅವರ ತಂದೆ ತಾಯಿ ದಶಕಗಳ ಮೊದಲೇ ಮುಂಬೈಗೆ ಹೋಗಿ ಅಲ್ಲೇ ಸೆಟ್ಲ್ ಆಗಿದ್ದು. ಅವರ ಮನೆಯಲ್ಲಿ ಮಾತಾಡೋದು ಕೊಂಕಣಿ ಭಾಷೆ. ಅವರು ಒಂದು ಕನ್ನಡ ಚಿತ್ರದಲ್ಲೂ ನಟಿಸಿದ್ದಾರೆ. 2008 ರಲ್ಲಿ ಬಿಡುಗಡೆಯಾದ ‘ಸತ್ಯ ಇನ್ ಲವ್’ ಚಿತ್ರದಲ್ಲಿ ಜೆನಿಲಿಯಾ ಶಿವರಾಜಕುಮಾರ ಎದುರು ನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದರು.

ಜೆನಿಲಿಯಾ 2003 ರಲ್ಲಿ ‘ತುಜೆ ಮೇರಿ ಕಸಮ್’ ಹೆಸರಿನ ಹಿಂದಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟು ಆ ಭಾಷೆ ಸೇರಿದಂತೆ ಅನೇಕ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಅಲ್ಲದೆ ಮರಾಠಿ ಚಿತ್ರಗಳಲ್ಲೂ ನಟಿಸಿದ್ದಾರೆ. ಅವರು ಅತಿಹೆಚ್ಚು ಕಾಣಿಸಿಕೊಂಡಿದ್ದು ತೆಲುಗು ಸಿನಿಮಾಗಳಲ್ಲಿ.

ಜೆನಿಲಿಯಾ ಮೊದಲ ಚಿತ್ರ ತುಜೆ ಮೇರಿ ಕಸಮ್ ಚಿತ್ರದಲ್ಲಿ ಅವರ ಪತಿ ರೀತೇಶ್ ದೇಶ್ಮುಖ್ ನಾಯಕರಾಗಿದ್ದರು. ನಿಮಗೆ ಗೊತ್ತಿದೆ, ರೀತೇಶ್ ದೇಶ್ಮುಖ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ವಿಲಾಸ್ ರಾವ್ ದೇಶ್ಮುಖ್ ಅವರ ಮಗ.

34-ವರ್ಷ ವಯಸ್ಸಿನ ಜೆನಿಲಿಯಾ ಮತ್ತು ರೀತೇಶ್ 2012 ರಲ್ಲಿ ಮದುವೆಯಾದರು. ಆಗಲೇ ಹೇಳಿದಂತೆ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಜೆನಿಲಿಯಾ ಸಾಂಪ್ರದಾಯಿಕ ಸುಂದರಿಯಾದರೂ ಮಾಡ್ ಡ್ರೆಸ್ಗಳಲ್ಲೂ ಮುದ್ದಾಗಿ ಕಾಣುತ್ತಾರೆ. ಮಹಾರಾಷ್ಟ್ರದ ಮಹಿಳೆಯರು ಸೀರೆ ಉಡುವ ರೀತಿ ಭಿನ್ನವಾಗಿದೆ. ಜೆನಿಲಿಯಾ ಅವರ ಹಾಗೆಯೂ ಸೀರೆಯುಟ್ಟು ಕೆಮೆರಾಗಳಿಗೆ ಪೋಸು ನೀಡಿದ್ದಾರೆ.

Click on your DTH Provider to Add TV9 Kannada