ಪ್ರೇಕ್ಷಕರಿಗೆ ‘ಮುಗಿಲ್ಪೇಟೆ’ ಇಷ್ಟ ಆಯ್ತಾ? ‘ಕ್ರೇಜಿ ಸ್ಟಾರ್’ ಪುತ್ರನ ಸಿನಿಮಾ ಬಗ್ಗೆ ಇಲ್ಲಿದೆ ಜನರ ಪ್ರತಿಕ್ರಿಯೆ
Mugilpete Kannada Movie: ಫಸ್ಟ್ ಡೇ ಫಸ್ಟ್ ಶೋ ನೋಡಿಬಂದ ಪ್ರೇಕ್ಷಕರಿಗೆ ‘ಮುಗಿಲ್ಪೇಟೆ’ ಇಷ್ಟ ಆಗಿದೆ. ಜನರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿರುವುದಕ್ಕೆ ಚಿತ್ರತಂಡದವರ ಮೊಗದಲ್ಲಿ ನಗು ಮೂಡಿದೆ.
‘ಕ್ರೇಜಿ ಸ್ಟಾರ್’ ರವಿಚಂದ್ರನ್ (Crazy Star Ravichandran) ಅವರ ಪುತ್ರ ಮನುರಂಜನ್ ರವಿಚಂದ್ರನ್ (Manuranjan Ravichandran) ನಟನೆಯ ‘ಮುಗಿಲ್ಪೇಟೆ’ (Mugilpete Kannada Movie) ಚಿತ್ರದ ಇಂದು (ನ.19) ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಭರತ್ ನಾವುಂದ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಮನುರಂಜನ್ ಅವರಿಗೆ ಜೋಡಿಯಾಗಿ ಖಯಾದು ಲೋಹರ್ ಅಭಿನಯಿಸಿದ್ದಾರೆ. ಇನ್ನುಳಿದ ಮುಖ್ಯಪಾತ್ರಗಳಲ್ಲಿ ಸಾಧುಕೋಕಿಲ, ರಂಗಾಯಣ ರಘು, ತಾರಾ ಅನುರಾಧ ಮುಂತಾದವರು ಬಣ್ಣ ಹಚ್ಚಿದ್ದಾರೆ. ಒಂದು ಸುಂದರವಾದ ಲವ್ಸ್ಟೋರಿ ಈ ಸಿನಿಮಾದಲ್ಲಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿಬಂದ ಪ್ರೇಕ್ಷಕರಿಗೆ ‘ಮುಗಿಲ್ಪೇಟೆ’ ಇಷ್ಟ ಆಗಿದೆ. ಜನರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿರುವುದಕ್ಕೆ ಚಿತ್ರತಂಡದವರ ಮೊಗದಲ್ಲಿ ನಗು ಮೂಡಿದೆ. ‘ಕ್ಲೈಮ್ಯಾಕ್ಸ್ ತುಂಬ ಎಮೋಷನಲ್ ಆಗಿದೆ. ಹಾಡುಗಳೆಲ್ಲ ಚೆನ್ನಾಗಿವೆ. ಮನುರಂಜನ್-ಖಯಾದು ಲೋಹರ್ ಜೋಡಿ ಸೂಪರ್ ಆಗಿದೆ’ ಎಂದೆಲ್ಲ ಜನರು ಹೊಗಳಿದ್ದಾರೆ.
ಇದನ್ನೂ ಓದಿ:
GGVV Review: ಹೀಗೂ ಇರಬಹುದಾ ಕ್ರೈಮ್ ಲೋಕ? ಇದು ರಾಜ್ ಬಿ. ಶೆಟ್ಟಿ ಇನ್ನೊಂದು ಮುಖ
Salaga Movie Review: ‘ಸಲಗ’ ತುಂಬಾ ರಗಡ್ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್ಗೆ ಮಾಸ್ ಪ್ರೇಕ್ಷಕರೇ ಟಾರ್ಗೆಟ್