ಶಿವಕುಮಾರ ಮಾತುಗಳಲ್ಲಿ ವೈರಾಗ್ಯದ ಭಾವ ವ್ಯಕ್ತವಾಗುತ್ತಿರುವುದು ಆಶ್ಚರ್ಯ ಹುಟ್ಟಿಸುತ್ತದೆ!
ನನಗ್ಯಾವ ಹುದ್ದೆಯೂ ಬೇಡ, ನೀವೆಲ್ಲ ಶಾಸಕನಾಗಿ ಆರಿಸಿ ನನಗೆ ಪ್ರೀತಿ ಅಭಿಮಾನ ತೋರಿದ್ದೀರಿ, ನನಗೆ ಅಷ್ಟು ಸಾಕು ಅಂತ ಶಿವಕುಮಾರ ವೇದಾಂತಿಗಳ ಹಾಗೆ ಮಾತಾಡಿದ್ದಾರೆ.
ರಾಮನಗರ: ಮೇಕೆದಾಟು, ಭಾರತ್ ಜೋಡೊ ಪಾದಯಾತ್ರೆಗಳಲ್ಲಿ ಪಾಲ್ಗೊಂಡು ದೈಹಿಕವಾಗಿ ಬಳಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಮಾನಸಿಕವಾಗಿಯೂ (mentally) ದಣಿದಿದ್ದಾರೆಯೇ ಅಂತ ಅನುಮಾನ ಮೂಡುತ್ತಿದೆ ಮಾರಾಯ್ರೇ. ಕನಕಪುರದ ಆರ್ ಇ ಎಸ್ (RES) ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತಾಡುವಾಗ ವೈರಾಗ್ಯದ ಭಾವ ವ್ಯಕ್ತವಾಗುತ್ತಿರುವುದನ್ನು ನೀವು ಗಮನಿಸಬಹುದು. ನನಗೂ ವಯಸ್ಸಾಗುತ್ತಿದೆ, ಇನ್ನೆಷ್ಟು ವರ್ಷ ರಾಜಕಾರಣ ಮಾಡಬಹುದು, ನನಗ್ಯಾವ ಹುದ್ದೆಯೂ ಬೇಡ, ನೀವೆಲ್ಲ ಶಾಸಕನಾಗಿ ಆರಿಸಿ ನನಗೆ ಪ್ರೀತಿ ಅಭಿಮಾನ ತೋರಿದ್ದೀರಿ, ನನಗೆ ಅಷ್ಟು ಸಾಕು ಅಂತ ಅವರು ವೇದಾಂತಿಗಳ ಹಾಗೆ ಮಾತಾಡಿದ್ದಾರೆ.
Latest Videos