Temple Tour: ಅಮೃತ ಶಿಲೆಯಲ್ಲಿ ಕಂಗೊಳಿಸುತ್ತಿರುವ ಸಾಯಿ ಬಾಬಾ
ಕರ್ನಾಟಕದ ಗಡಿಯನ್ನು ಹೊಂದಿಕೊಂಡಿರುವ ಮಹಾರಾಷ್ಟ್ರದ ಶಿರಡಿಯಲ್ಲಿನ ಸಾಯಿಬಾಬಾ ದೇವಸ್ಥಾನಕ್ಕೆ ಪ್ರತಿವರ್ಷ ದರ್ಶನ ಮಾಡಲು ಬಡ ಭಕ್ತರಿಗೆ ಅಸಾಧ್ಯದ ಮಾತು.
ಮಹಾರಾಷ್ಟ್ರದ ಶಿರಡಿ ಯಾರಿಗೆ ಗೊತ್ತಿಲ್ಲಾ ಹೇಳಿ. ಶಿರಡಿಯ ಸಾಯಿ ಬಾಬಾ ದೇವಸ್ಥಾನಕ್ಕೆ ದೇಶದ ಭಕ್ತರಷ್ಟೇಯಲ್ಲಾ ಜಗತ್ತಿನಾದ್ಯಂತ ಭಕ್ತರಿದ್ದಾರೆ. ಶಿರಡಿ ಸಾಯಿ ಬಾಬಾ ಅವರ ಪಾವಾಡಗಳು ಅನೇಕ. ಮನುಕುಲದ ಉದ್ಧಾರಕ್ಕೆ ಅವತಾರವೆತ್ತಿದ ಪುರುಷ, ದೇವತಾ ಮನುಷ್ಯರೆಂದು ಸಾಯಿ ಬಾಬಾ ಅವರನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಕಷ್ಟಗಳನ್ನು ನಿವಾರಣೆ ಮಾಡಿ ಒಳಿತು ಮಾಡಪ್ಪಾ ಎಂದು ಸಾಯಿ ಬಾಬಾರನ್ನಾ ನೆನೆದು ಬೇಡಿಕೆ ಇಡುತ್ತೇವೆ. ಭಕ್ತರ ಕಷ್ಟ ಕರಗಿಸುವ ಸಾಯಿ ಬಾಬಾ ಶಿರಡಿ ವಾಸಿಯೆಂದು ಭಕ್ತಗಣ ಕರೆಯುತ್ತದೆ. ಪ್ರತಿ ವರ್ಷ ಅಪಾರ ಸಂಖ್ಯೆಯಲ್ಲಿ ಭಕ್ತರು ಸಾಯಿಬಾಬಾ ದರ್ಶನಕ್ಕೆ ಶಿರಡಿಯತ್ತ ಮುಖ ಮಾಡುವುದು ಕಂಡು ಬರುತ್ತದೆ. ಕರ್ನಾಟಕದ ಗಡಿಯನ್ನು ಹೊಂದಿಕೊಂಡಿರುವ ಮಹಾರಾಷ್ಟ್ರದ ಶಿರಡಿಯಲ್ಲಿನ ಸಾಯಿಬಾಬಾ ದೇವಸ್ಥಾನಕ್ಕೆ ಪ್ರತಿವರ್ಷ ದರ್ಶನ ಮಾಡಲು ಬಡ ಭಕ್ತರಿಗೆ ಅಸಾಧ್ಯದ ಮಾತು. ಈ ಕಾರಣ ವಿಜಯಪುರ ನಗರದ ಜನರು ಶಿರಡಿ ಸಾಯಿ ಬಾಬಾ ಮಂದಿರ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ.