ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೊಕ್ಕು ಮುರಿಯುತ್ತೇನೆ ಅಂದಿದ್ದ ದೇವೇಗೌಡ ಮುರಿದ್ರಾ? ರಾಜಣ್ಣ
ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜಿಸಲು ಸರ್ಕಾರ ನಿರ್ಧರಿಸುವುದು ಸತ್ಯ, ಮೊದಲು ಮೈಸೂರಲ್ಲಿ ಆಯೋಜಿಸಬೇಕೆಂಬ ಯೋಚನೆ ಇತ್ತು, ಕಾರಣಾಂತರಗಳಿಂದ ಅದನ್ನು ರದ್ದು ಮಾಡಿ ಹಾಸನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ, ಡಿಸೆಂಬರ್ 5 ರಂದು ಸಮಾವೇಶ ನಡೆಸಲಾಗುವುದು ಎಂದು ರಾಜಣ್ಣ ಹೇಳಿದರು.
ದೆಹಲಿ: ಪಕ್ಷ ಟಾಸ್ಕ್ ನೀಡಿದರೆ ಜೆಡಿಎಸ್ ಎಲ್ಲ ಶಾಸಕರನ್ನು ಕಾಂಗ್ರೆಸ್ ಗೆ ತರುತ್ತೇನೆ ಅಂತ ಸಿಪಿ ಯೋಗೇಶ್ವರ್ ಹೇಳಿರುವುದಕ್ಕೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಕೆಎನ್ ರಾಜಣ್ಣ, ಅವರ ಮನಸಲ್ಲಿ ಏನಿದೆಯೋ ಗೊತ್ತಿಲ್ಲ, ವಿಧಾನಸಭಾ ಚುನಾವಣೆಯಲ್ಲಿ ದೇವೇಗೌಡರು ಸಿದ್ದರಾಮಯ್ಯ ಸೊಕ್ಕು ಮುರಿಯುತ್ತೇನೆ, ಸರ್ಕಾರವನ್ನು ಬೀಳಿಸುತ್ತೇನೆ ಅಂದಿದ್ದರು, ಅದನ್ನವರು ಮಾಡಿದ್ರಾ? ಹಾಗೆಯೇ ಯೋಗೇಶ್ವರ್ ಜೆಡಿಎಸ್ ಶಾಸಕರನ್ನು ಕರೆತರುವ ಬಗ್ಗೆ ಮಾತಾಡಿರುತ್ತಾರೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಪೆಕ್ಸ್ ಬ್ಯಾಂಕ್ ಹಗರಣ: ಕೆಎನ್ ರಾಜಣ್ಣ ವಿರುದ್ಧ ರಾಜ್ಯಪಾಲರ ಮೊರೆ ಹೋದ ದಿನೇಶ್ ಕಲ್ಲಹಳ್ಳಿ
Follow Us
Latest Videos
