ಗೌಡನಪಾಳ್ಯ ಕೆರೆ ಅಭಿವೃದ್ಧಿ ಕಾಮಗಾರಿಯು ಉತ್ತರಹಳ್ಳಿ ಪರಮಹಂಸ ಬಡಾವಣೆ ನಿವಾಸಿಗಳ ಬದುಕು ನರಕಸದೃಶ ಮಾಡಿದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 03, 2022 | 12:32 AM

ಗೌಡನಪಾಳ್ಯ ಕೆರೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವದರಿಂದ ಮಳೆನೀರನ್ನು ರಾಜಾ ಕಾಲುವೆ ಬಿಟ್ಟಿರುವುದು ಅವಾಂತರಕ್ಕೆ ಕಾರಣವಾಗಿದೆ ಎಂದು ಈ ಬಡಾವಣೆಯಲ್ಲಿ ಎರಡು ದಶಕಗಳಿಂದ ವಾಸಿಸುತ್ತಿರುವ ನಿವಾಸಿಯೊಬ್ಬರು ಹೇಳುತ್ತಾರೆ.

Bengaluru:  ಮಳೆಗಾಲದಲ್ಲಿ ಬೆಂಗಳೂರಿನ ನಿವಾಸಿಗಳು ಪಡಬಾರದ ಬವಣೆ ಪಡುತ್ತಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಸಿಬ್ಬಂದಿ ಸಮಯಾನುಸಾರವಾಗಿ ಒಳರಂಡಿ ಮತ್ತು ರಾಜಾ ಕಾಲುವೆಗಳನ್ನು (storm water drain) ಸ್ವಚ್ಛಗೊಳಸುತ್ತಿದ್ದರೆ ಪ್ರಾಯಶಃ ಜನರ ಪರದಾಟ ಸ್ವಲ್ಪ ಕಡಿಮೆಯಾಗಬಹುದು. ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಈ ಬಿಬಿಎಮ್ ಪಿಯಲ್ಲಿ ಅಧಿಕಾರಿಗಳದ್ದೇ ಕಾರುಬಾರು. ಕಳೆದ ಎರಡು ಮೂರು ವರ್ಷಗಳಿಂದ ಇದೇ ಸ್ಥಿತಿಯಿದೆ. ಜನಪ್ರತಿನಿಧಿಗಳು (corporators) ಅಲ್ಲಿದ್ದದರೆ ಪರಿಸ್ಥಿತಿಯೇನೂ ಬೇರೆ ಇರುತ್ತಿರಲಿಲ್ಲ, ಅದು ಬೇರೆ ವಿಷಯ. ನಾವಿಲ್ಲಿ ನಿಮಗೆ ತೋರಿಸುತ್ತಿರುವುದು ಉತ್ತರಹಳ್ಳಿಯ ಪರಮಹಂಸ ಬಡಾವಣೆ. ರವಿವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಬಡಾವಣೆಯ ಸ್ಥಿತಿ ಎಕ್ಕುಟ್ಟಿ ಹೋಗಿದೆ. ರಸ್ತೆ ಉದ್ದಕ್ಕೆ ಸೀಳಿಬಿಟ್ಟಿದೆ ಮತ್ತು ಇಲ್ಲಿನ ನಿವಾಸಿಗಳು ಹೇಳುವ ಹಾಗೆ ಬಡಾವಣೆಯ ಸುಮಾರು 80 ಮನೆಗಳು ಜಲಾವೃತಗೊಂಡಿದ್ದವು.

ಗೌಡನಪಾಳ್ಯ ಕೆರೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವದರಿಂದ ಮಳೆನೀರನ್ನು ರಾಜಾ ಕಾಲುವೆ ಬಿಟ್ಟಿರುವುದು ಅವಾಂತರಕ್ಕೆ ಕಾರಣವಾಗಿದೆ ಎಂದು ಈ ಬಡಾವಣೆಯಲ್ಲಿ ಎರಡು ದಶಕಗಳಿಂದ ವಾಸಿಸುತ್ತಿರುವ ನಿವಾಸಿಯೊಬ್ಬರು ಹೇಳುತ್ತಾರೆ. ರಾತ್ರಿಯಿಡೀ ಮನೆಗಳಲ್ಲಿ 4-5 ಅಡಿಗಳಷ್ಟು ನೀರು ನಿಂತಿತ್ತು. ಮನೆಗಳಲ್ಲಿದ್ದ ಹಲವಾರು ಸಾಮಾನುಗಳು ಕೊಚ್ಚಿಕೊಂಡು ಹೋಗಿವೆವಯಂತೆ. ಈ ನಿವಾಸಿ ಹೇಳುವಂತೆ ಅಡುಗೆ ಅನಿಲ ತುಂಬಿದ ಸಿಲಿಂಡರ್ ಸಹ ನೀರಲ್ಲಿ ಕೊಚ್ಚಿಕೊಂಡು ಹೋಗಿದೆ.

ಜನಪ್ರತಿನಿಧಿಗಳು ಸಮಸ್ಯೆ ಕೇಳಿಸಿಕೊಳ್ಳುತ್ತಾರೆ, ಅವರಿಂದ ಏನೂ ಸಮಸ್ಯೆ ಇಲ್ಲ, ಅದರೆ ಕೆರೆಯ ಅಭಿವೃದ್ಧಿ ಕೆಲಸ ಆರಂಭವಾದಾಗಿನಿಂದ ನೀರು ಹರಿದು ಮನೆಗಳಲ್ಲಿ ನುಗ್ಗುವುದು ಆರಂಭವಾಗಿದೆ ಎಂದು ನಿವಾಸಿ ಹೇಳುತ್ತಾರೆ. ನೀರಿನೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಕೆಸರು ಕೂಡ ಮನೆಗಳೊಳಗೆ ಸೇರಿ ಶೇಖರಣೆಗೊಂಡಿರುವುದು ನಿಮಗೆ ಕಾಣುತ್ತದೆ.

ಇದೊಂದು ತಿಂಗಳು ಕಳೆದರೆ ಮಳೆಗಾಲ ಶುರುವಾಗುತ್ತದೆ. ಈಗಲೇ ಸ್ಥಿತಿ ಹೀಗಿರಬೇಕಾದರೆ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳ ಸ್ಥಿತಿ ಏನಾಗಬೇಡ. ಬಿಬಿಎಮ್ ಪಿ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಪರಮಹಂಸ ಬಡಾವಣೆಯ ನಿವಾಸಿಗಳಿಗೆ ತೊದರೆಯಾಗದಂಥ ಕ್ರಮಗಳನ್ನು ಜಾರಿಗೊಳಿಸಬೇಕಿದೆ,

ಇದನ್ನೂ ಓದಿ:  Karnataka Rain: ರಾಜ್ಯದ ಹಲವೆಡೆ ಗಾಳಿ, ಆಲಿಕಲ್ಲು ಸಹಿತ ಮಳೆ: ಮಳೆಯಿಂದ ಬೈಕ್ ಸವಾರರು, ರಸ್ತೆ ಬದಿ ವ್ಯಾಪಾರಿಗಳ ಪರದಾಟ