ಶ್ರೀರಂಗಪಟ್ಟಣದ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಸೂರ್ಯರಶ್ಮಿ ಈಶ್ವರಲಿಂಗ ಸ್ಪರ್ಶಿಸುವ ವಿಸ್ಮಯಕಾರಿ ದೃಶ್ಯಕ್ಕೆ ಸಾಕ್ಷಿಯಾದ ಭಕ್ತರು

|

Updated on: Jan 15, 2024 | 12:43 PM

ಇತ್ತೀಚಿನ ದಿನಗಳಲ್ಲಿ ಕಾಶಿ ಚಂದ್ರಮೌಳೇಶ್ವರ ದೇವಸ್ಥಾನದ ಸುತ್ತಮುತ್ತ ದೊಡ್ಡ ದೊಡ್ಡ ಕಟ್ಟಡಗಳು ತಲೆಯೆತ್ತಿರುವುದರಿಂದ ಈ ಕೌತುಕಮಯ ಪ್ರಕ್ರಿಯೆ ಕೊಂಚ ತಡವಾಗಿ ಅನಾವರಣಗೊಳ್ಳುತ್ತಿದೆ ಎಂದು ಹೇಳುತ್ತಾರೆ. ಕಾಶಿ ಚಂದ್ರಮೌಳೇಶ್ವರ ದೇವಸ್ಥಾನ ಶ್ರೀರಂಗಪಟ್ಟಣದಲ್ಲಿ ಕಾವೇರಿ ತೀರದಲ್ಲಿದೆ.

ಮಂಡ್ಯ: ಮಕರ ಸಂಕ್ರಾಂತಿಯ ಹಬ್ಬದ (Makara Sankranti festival) ಪಾವನ ದಿನವಾಗಿರುವ ಇಂದು ಜಿಲ್ಲೆಯ ಶ್ರೀರಂಗಪಟ್ಟಣದ (Srirangapatna) ಚಂದವನ ಅಶ್ರಮದಲ್ಲಿರುವ ಕಾಶಿ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ (Kashi Chandramouleshwara temple) ಬೆಳಗಿನ ಜಾವದಿಂದಲೇ ಆಗಮಿಸಿದ ಜನ ಸೂರ್ಯೋದಯದ ಬಳಿಕ ವಿಸ್ಮಯವೊಂದನ್ನು ವೀಕ್ಷಿಸಿ ಕೃತಾರ್ಥರಾದರು. ಈ ವಿಸ್ಮಯವನ್ನು ದೇವಸ್ಥಾನದ ಪ್ರಧಾನ ಅರ್ಚಕರು ಗುಡಿಯಲ್ಲಿ ನೆರೆದಿದ್ದ ಭಕ್ತರಿಗೆ ವಿವರಿದರು. ಕಾಶಿ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ, ಸೂರ್ಯನ ಕಿರಣ ಕೇವಲ ಶಿವಲಂಗದ ಮೇಲೆ ಸ್ಪರ್ಶಮಾತ್ರ ಆಗದೆ ಸೃಷ್ಟಿಯ ಹಾಗೆ ಸ್ಥಿತಿಯನ್ನು ತಾಳಿ, ಲಯ ಹೊಂದುತ್ತದೆ ಎಂದು ಅವರು ಹೇಳುತ್ತಾರೆ. ಸೂರ್ಯನ ಕಿರಣ ಸ್ಪರ್ಶವಾದಾಗ ಅದು ಸೃಷ್ಟಿಯೆನಿಸಿಕೊಳ್ಳುತ್ತದೆ. ಇಲ್ಲಿ, ಸೂರ್ಯ ಉದಯಿಸಿದ ಬಳಿಕ ಕ್ರಮೇಣ ಮೇಲೇರುತ್ತಾ ಮುಂದೆ ಸಾಗುವಾಗ ಈಶ್ವರ ಲಿಂಗದ ಜೊತೆ ವಿಲೀನಗೊಳ್ಳುತ್ತದೆ, ದೇವಸ್ಥಾನದಲ್ಲಿ ಸೂರ್ಯರಶ್ಮಿಯು ಪಾರ್ವತಿಯನ್ನು ಸಹ ಸ್ಪರ್ಶಿಸುತ್ತದೆ ಎಂದು ಹೇಳುವ ಅರ್ಚಕರು, ಇತ್ತೀಚಿನ ದಿನಗಳಲ್ಲಿ ಕಾಶಿ ಚಂದ್ರಮೌಳೇಶ್ವರ ದೇವಸ್ಥಾನದ ಸುತ್ತಮುತ್ತ ದೊಡ್ಡ ದೊಡ್ಡ ಕಟ್ಟಡಗಳು ತಲೆಯೆತ್ತಿರುವುದರಿಂದ ಈ ಕೌತುಕಮಯ ಪ್ರಕ್ರಿಯೆ ಕೊಂಚ ತಡವಾಗಿ ಅನಾವರಣಗೊಳ್ಳುತ್ತಿದೆ ಎಂದು ಹೇಳುತ್ತಾರೆ. ಕಾಶಿ ಚಂದ್ರಮೌಳೇಶ್ವರ ದೇವಸ್ಥಾನ ಶ್ರೀರಂಗಪಟ್ಟಣದಲ್ಲಿ ಕಾವೇರಿ ತೀರದಲ್ಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published on: Jan 15, 2024 11:17 AM