ಸೂರಣಗಿಗೆ ಭೇಟಿ ನೀಡಿ ದುರ್ಮರಣಕ್ಕೀಡಾದ ಯಶ್ ಅಭಿಮಾನಿಗಳ ಕುಟುಂಬಗಳನ್ನು ಸಂತೈಸಿದ ಕೆಎಸ್ ಈಶ್ವರಪ್ಪ
ದುರ್ಮರಕ್ಕೀಡಾದ ಕುಟುಂಬಗಳಿಗೆ ಕರ್ನಾಟಕ ಸರ್ಕಾರ ತಲಾ ಎರಡು ಲಕ್ಷ ರೂ. ಗಳ ಪರಿಹಾರ ನೀಡಿದೆ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟಿಲ್ ಕಳೆದ ವಾರ ಸೂರಣಗಿಗೆ ಹೋಗಿ ಚೆಕ್ ವಿತರಿಸಿದ್ದರು. ಅದಲ್ಲದೆ ಭೂ ಒಡೆತನ ಯೋಜನೆ ಅಡಿಯಲ್ಲಿ, ದುಡಿಯುವ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ಜಮೀನು ನೀಡುವ ಭರವಸೆಯನ್ನೂ ಸಚಿವರು ನೀಡಿದ್ದಾರೆ.
ಗದಗ: ಜನವರಿ 8 ರಂದು ಚಲನಚಿತ್ರ ನಟ ಯಶ್ (cine actor Yash) ಹುಟ್ಟುಹಬ್ಬದ ಪ್ರಯುಕ್ತ ಊರಲ್ಲಿ ಅವರ ಕಟೌಟ್ ಕಟ್ಟುವಾಗ ಕಟೌಟ್ ಗೆ ಕಟ್ಟಿದ್ದ ಲೋಹದ ಕಂಬ ಬೀದಿದೀಪ ವಿದ್ಯುತ್ ಕಂಬಕ್ಕೆ ತಾಕಿ ವಿದ್ಯುತ್ ಪ್ರವಹಿಸಿದ ಕಾರಣ ದಾರುಣ ಸಾವನ್ನಪ್ಪಿದ ಮೂವರು ಯುವಕರ ಮನೆಗಳಿಗೆ ಶನಿವಾರ ಸಾಯಂಕಾಲ ಭೇಟಿ ನೀಡಿದ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ದುಃಖತಪ್ತ ಕುಟುಂಬ ಸದಸ್ಯರನ್ನು ಸಂತೈಸಿದರು. ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿಯ ಗ್ರಾಮದ (Suranagi village) ಯುವಕರಾಗಿದ ಹಣಮಂತು, ನವೀನ್ ಮತ್ತು ಮುರಳಿಯ ಮನೆಗಳಿಗೆ ಸ್ಥಳೀಯ ಕಾರ್ಯಕರ್ತರೊಂದಿಗೆ ತೆರಳಿದ ಈಶ್ವರಪ್ಪ ಮೂರೂ ಕುಟುಂಬಗಳೊಂದಿಗೆ ಮಾತಾಡಿದರು. ಈ ಸಂದರ್ಭದಲ್ಲಿ ಒಂದು ಅಭಿವೃದ್ಧಿ ನಿಗಮ ಮತ್ತು ಸಹಕಾರ ಬ್ಯಾಕೊಂದರ ವತಿಯಿಂದ ತಲಾ ಒಂದೊಂದು ಲಕ್ಷ ರೂ. ಯಂತೆ ಹಣಮಂತು, ನವೀನ್ ಮತ್ತು ಮುರಳಿಯ ಕುಟುಂಬಗಳಿಗೆ ಎರಡೆರಡು ಲಕ್ಷರೂ.ಗಳನ್ನು ನೀಡಲಾಯಿತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Latest Videos