ಲೋಕಸಭಾ ಚುನಾವಣೆ: ಬಿಜೆಪಿ ಟಿಕೆಟ್ ಆಕಾಂಕ್ಷಿ ಸಂಜಯ ಪಾಟೀಲರಿಂದ ಪದಾಧಿಕಾರಿಗಳಿಗೆ ಗಿಫ್ಟ್!
ಜಿಲ್ಲೆಯ ಎಲ್ಲ ಯೂನಿಟ್ ಗಳ ಪದಾಧಿಕಾರಿಗಳನ್ನು ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿ ತಮ್ಮ ಆಕಾಂಕ್ಷೆಯನ್ನು ಜಾಹೀರುಗೊಳಿಸಿದ ಸಂಜಯ, ಆಹ್ವಾನಿತರಿಗೆ ಉಡುಗೊರೆಯಾಗಿ ನೋಡಲು ಸುಂದರವಾಗಿ ಕಾಣುವ ಹೆಲ್ಮೆಟ್ ಗಳನ್ನು ನೀಡಿದರು.
ಬೆಳಗಾವಿ: ಗಿಫ್ಟ್ ಗಳನ್ನು ನೀಡಿ ಮತದಾರನ್ನು ಒಲಿಸಿಕೊಳ್ಳೋದು ಚುನಾವಣೆ ದಿನಾಂಕ ಘೋಷನೆಯಾಗಿ ಪಕ್ಷದ ಹೈಕಮಾಂಡ್ ಟಿಕೆಟ್ ಗಳನ್ನು ಬಳಿಕ, ಅದರೆ ಅದಕ್ಕೂ ಮೊದಲು ಕ್ಷೇತ್ರದ ಪದಾಧಿಕಾರಿಗಳ ಫೇವರ್ ಗಳಿಸ ಬೇಡವೇ? ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha polls) ಬೆಳಗಾವಿಯ ಕ್ಷೇತ್ರವೊಂದರ ಟಿಕೆಟ್ ಆಕಾಂಕ್ಷಿಯಾಗಿರುವ ಸ್ಥಳೀಯ ಬಿಜೆಪಿ ನಾಯಕ ಸಂಜಯ ಪಾಟೀಲ್ (Sanjay Patil) ಅದೇ ಕೆಲಸ ಮಾಡುತ್ತಿದ್ದಾರೆ. ಇಂದು ಜಿಲ್ಲೆಯ ಎಲ್ಲ ಯೂನಿಟ್ ಗಳ ಪದಾಧಿಕಾರಿಗಳನ್ನು (office bearers) ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿ ತಮ್ಮ ಆಕಾಂಕ್ಷೆಯನ್ನು ಜಾಹೀರುಗೊಳಿಸಿದ ಸಂಜಯ, ಆಹ್ವಾನಿತರಿಗೆ ಉಡುಗೊರೆಯಾಗಿ ನೋಡಲು ಸುಂದರವಾಗಿ ಕಾಣುವ ಹೆಲ್ಮೆಟ್ ಗಳನ್ನು ನೀಡಿದರು. ಹೆಲ್ಮೆಟ್ ಮೇಲೆ ಐಎಸ್ ಐ ಮುದ್ರೆ ಇದೆಯೋ ಇಲ್ವೋ ಗೊತ್ತಿಲ್ಲ ಅದರೆ, ಅದರ ಮುಂಭಾಗದಲ್ಲಿ ಬಿಜೆಪಿಯ ಚಿಹ್ನೆ ಮತ್ತು ಹಿಂಭಾಗದಲ್ಲಿ ಸಂಜಯ ಪಾಟೀಲ್ ಭಾವಚಿತ್ರವಂತೂ ಇದೆ. ನಿಮಗೆ ನೆನಪಿರಬಹುದು, 2019ರ ಲೋಕಸಭಾ ಚುನಾವಣೆಯಲ್ಲೂ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಜಯ ಗಿಫ್ಟ್ ಗಳನ್ನು ಹಂಚಿದ್ದರು, ಆದರೆ ಕೊನೆ ಗಳಿಗೆಯಲ್ಲಿ ಟಿಕೆಟ್ ಅವರ ಕೈತಪ್ಪಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ