ಎರಡು ವರ್ಷಗಳ ನಂತರ ಆಷಾಢ ಮಾಸದ ಮೊದಲ ಶುಕ್ರವಾರ ಭಕ್ತರಿಗೆ ಮೈಸೂರು ಚಾಮುಂಡೇಶ್ವರಿ ದೇವಿಯ ದರ್ಶನ ಭಾಗ್ಯ!
ಕೋವಿಡ್ ಪೀಡೆಯಿಂದಾಗಿ ಎರಡು ವರ್ಷಗಳ ನಂತರ ಭಕ್ತರಿಗೆ ನಾಡದೇವತೆಗೆ ಪೂಜೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಮೈಸೂರು ಜಿಲಾಡಳಿತ ವತಿಯಿಂದ ಚಾಮುಂಡಿ ಬೆಟ್ಟಕ್ಕೆ ಉಚಿತ ಸಾರಿಗೆ ವ್ಯವಸ್ಥೆಯನ್ನೂ ಮಾಡಲಾಗಿದೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ (Chamundi Hills) ಆಷಾಢ ಮಾಸದ ಮೊದಲ ಶುಕ್ರವಾರದಂದು (Friday) ಇಂದು ಭಕ್ತಾದಿಗಳಿಗೆ ತಾಯಿ ಚಾಮುಂಡೇಶ್ವರಿಯ (Chamundeshwari) ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದೆಂದು ಗುರುವಾರವೇ ಹೇಳಿದ್ದೆವು. ಕೋವಿಡ್ ಪೀಡೆಯಿಂದಾಗಿ ಎರಡು ವರ್ಷಗಳ ನಂತರ ಭಕ್ತರಿಗೆ ನಾಡದೇವತೆಗೆ ಪೂಜೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಟಿವಿ9 ಕನ್ನಡ ವಾಹಿನಿಯ ಮೈಸೂರು ಪ್ರತಿನಿಧಿ ರಾಮ್, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಮತ್ತು ಪ್ರಧಾನ ಅರ್ಚಕರಾದ ಡಾ ಶಶಿಶೇಖರ ದೀಕ್ಷಿತ್ ಅವರು ಹೇಳುವಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಮ್ಮನ ದರ್ಶನಕ್ಕೆ ಬರುತ್ತಿದ್ದಾರೆ ಮತ್ತು ಅವರಿಗೆ ತೊಂದರೆಯಾಗದ ಹಾಗೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮೈಸೂರು ಜಿಲಾಡಳಿತ ವತಿಯಿಂದ ಚಾಮುಂಡಿ ಬೆಟ್ಟಕ್ಕೆ ಉಚಿತ ಸಾರಿಗೆ ವ್ಯವಸ್ಥೆಯನ್ನೂ ಮಾಡಲಾಗಿದೆ.
ಇದನ್ನೂ ಓದಿ: ನಾಳೆ ಆಷಾಢದ ಮೊದಲ ಶುಕ್ರವಾರ; ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುವ ಭಕ್ತಾದಿಗಳಿಗೆ ಮೈಸೂರು ಪಾಕ್ ಪ್ರಸಾದ