ನಾಳೆ ಆಷಾಢದ ಮೊದಲ ಶುಕ್ರವಾರ; ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುವ ಭಕ್ತಾದಿಗಳಿಗೆ ಮೈಸೂರು ಪಾಕ್ ಪ್ರಸಾದ
ಎರಡು ವರ್ಷಗಳ ಬಳಿಕ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಲಾಗುತ್ತಿದೆ. ಹಾಗಾಗಿ ದೇವಸ್ಥಾನದ ಸೇವಾ ಸಮಿತಿ ಸದಸ್ಯರು ಗುಡಿಗೆ ಬರುವ ಭಕ್ತರಿಗಾಗಿ ಪ್ರಸಾದದ ರೂಪದಲ್ಲಿ ಹಾರ್ಲಿಕ್ಸ್ ಮೈಸೂರು ಪಾಕ್ ನೀಡಲು ತಯಾರಿ ನಡೆಸಿದ್ದಾರೆ.
Mysuru: ನಾಳಿನ ಶುಕ್ರವಾರವು ಆಷಾಢ (Ashadha) ಮಾಸದ ಮೊದಲ ಶುಕ್ರವಾಗಿದೆ. ಮೈಸೂರಿನ ಚಾಮುಂಡೇಶ್ವರಿ (Chamundeshwari) ದೇವಸ್ಥಾನದಲ್ಲಿ ಎರಡು ವರ್ಷಗಳ ಬಳಿಕ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಲಾಗುತ್ತಿದೆ. ಹಾಗಾಗಿ ದೇವಸ್ಥಾನದ ಸೇವಾ ಸಮಿತಿ ಸದಸ್ಯರು ಗುಡಿಗೆ ಬರುವ ಭಕ್ತರಿಗಾಗಿ ಪ್ರಸಾದದ ರೂಪದಲ್ಲಿ ಹಾರ್ಲಿಕ್ಸ್ ಮೈಸೂರು ಪಾಕ್ ನೀಡಲು ತಯಾರಿ ನಡೆಸಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ 175 ಕೆಜಿ ಬೇಸನ್, 600 ಕೆಜಿ ಸಕ್ಕರೆ, 30 ಕೆಜಿ ಹಾರ್ಲಿಕ್ಸ್ ಹಾಗೂ 18 ಟಿನ್ ತುಪ್ಪ ಬಳಸಿ ಮೈಸೂರು ಪಾಕ್ ತಯಾರಿಸಲಾಗುತ್ತಿದೆ. 30 ನುರಿತ ಬಾಣಸಿಗರು ಮೈಸೂರು ಪಾಕ್ ತಯಾರಿಕೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಅಂಜನಾದ್ರಿ ಬೆಟ್ಟ ಹತ್ತಿ ಹನುಮನ ದರ್ಶನ ಪಡೆದರು ಹಿಂದಿನ ಮೈಸೂರು ಒಡೆಯರ್ ಸಂಸ್ಥಾನದ ಯದುವೀರ್ ಮತ್ತು ತ್ರಿಷಿಕಾ
Latest Videos