ಅಂಜನಾದ್ರಿ ಬೆಟ್ಟ ಹತ್ತಿ ಹನುಮನ ದರ್ಶನ ಪಡೆದರು ಹಿಂದಿನ ಮೈಸೂರು ಒಡೆಯರ್ ಸಂಸ್ಥಾನದ ಯದುವೀರ್ ಮತ್ತು ತ್ರಿಷಿಕಾ
ಹನುಮನಿಗೆ ಪೂಜೆ ಸಲ್ಲಿಸಿದ ಬಳಿಕ ಯುದುವೀರ್ ಅಲ್ಲಿನ ಅರ್ಚಕರು ಮತ್ತು ದೇವಸ್ಥಾನ ಟ್ರಸ್ಟ್ ನ ಕೆಲ ಸದಸ್ಯರೊಂದಿಗೆ ಒಂದೆರಡು ನಿಮಿಷಗಳ ಕಾಲ ಮಾತಾಡಿದರು. ಹಂಪಿಗೆ ಭೇಟಿ ನೀಡಿದ್ದ ಕುಟುಂಬವು ಅಲ್ಲಿಂದ ಅಂಜನಾದ್ರಿ ಬೆಟ್ಟವನ್ನು ತಲುಪಿತು.
Gangavati: ಹಿಂದಿನ ಮೈಸೂರು ಒಡೆಯರ್ ರಾಜಸಂಸ್ಥಾನದ ಯದುವೀರ್ ಒಡೆಯರ್ (Yaduveer Wodeyar) ಅವರು ಧರ್ಮಪತ್ನಿ ತ್ರಿಷಿಕಾ (Trishika) ಮತ್ತು ಕುಟುಂಬದ ಇನ್ನಿಬ್ಬರು ಸದಸ್ಯರೊಂದಿಗೆ ಸೋಮವಾರ ಬೆಳಗ್ಗೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟದ (Anjanadri Hill) 575 ಮೆಟ್ಟಿಲುಗಳನ್ನು ಹತ್ತಿ ಹನುಮನ ದರ್ಶನ ಪಡೆದರು. ಬೆಟ್ಟ ಹತ್ತಿದ ಬಳಿಕ ಯದುವೀರ್ ಮತ್ತು ಅವರೊಂದಿಗಿದ್ದವರು ಕೊಂಚವೂ ಬಳಲಿದಂತೆ ಕಾಣಲಿಲ್ಲ. ಹನುಮನಿಗೆ ಪೂಜೆ ಸಲ್ಲಿಸಿದ ಬಳಿಕ ಯುದುವೀರ್ ಅಲ್ಲಿನ ಅರ್ಚಕರು ಮತ್ತು ದೇವಸ್ಥಾನ ಟ್ರಸ್ಟ್ ನ ಕೆಲ ಸದಸ್ಯರೊಂದಿಗೆ ಒಂದೆರಡು ನಿಮಿಷಗಳ ಕಾಲ ಮಾತಾಡಿದರು. ಹಂಪಿಗೆ ಭೇಟಿ ನೀಡಿದ್ದ ಕುಟುಂಬವು ಅಲ್ಲಿಂದ ಅಂಜನಾದ್ರಿ ಬೆಟ್ಟವನ್ನು ತಲುಪಿತು.
ಇದನ್ನೂ ಓದಿ: ಬಾವಿಯೊಳಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ ರೋಚಕ ವಿಡಿಯೋ ವೈರಲ್

