ಜಗಳೂರು: ಪಾಲನಾಯಕನಕೋಟೆ ಗ್ರಾಮದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಅಗ್ನಿ‌ಕುಂಡ ದಾಟಿ ಹರಕೆ ತೀರಿಸಿದ ಭಕ್ತರು!

Edited By:

Updated on: Oct 26, 2023 | 3:58 PM

Jagalur, Davangere: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ‌ ಪಾಲನಾಯಕನಕೋಟೆ (Palanayakanakote) ಗ್ರಾಮದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಅಗ್ನಿ‌ಕುಂಡ ದಾಟಿ ಹರಕೆ ತೀರಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಜಗಳೂರು (Jagalur, Davangere) ತಾಲೂಕಿನ‌ ಪಾಲನಾಯಕನಕೋಟೆ (Palanayakanakote) ಗ್ರಾಮದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಅಗ್ನಿ‌ಕುಂಡ ದಾಟಿ (fire pit, agnikund) ಹರಕೆ ತೀರಿಸಿದ್ದಾರೆ. ಗ್ರಾಮದ ಚೌಡೇಶ್ವರಿ ಉತ್ಸವದಲ್ಲಿ ಭಕ್ತರು (Devotees) ಹರಕೆ ತೀರಿಸಿದರು.

ಇಡೀ ಗ್ರಾಮದ ಜನ ಸೇರಿ ಬೆಳಿಗ್ಗೆ ಐದು ಗಂಟೆಗೆ ಗಂಗೆ ಪೂಜೆ, ಕುಂಭ ಹೊತ್ತು‌ ಮಹಿಳೆಯರು ದೇವಿಗೆ ಸ್ವಾಗತ ಕೋರಿದರು. ಭೀಕರ ಬರದ ನಡುವೆಯೂ ಸಹ ಚೌಡೇಶ್ವರಿ ದೇವಿಗೆ ಭಕ್ತ ಸಾಗರ ಭಕ್ತಿಯ ಹರಕೆ ತೀರಿಸಿತು. ಗ್ರಾಮದ ಬಹುತೇಕರು ಅಗ್ನಿ ಕುಂಡ ದಾಟಿ, ಭಕ್ತಿ ಸಮರ್ಪಿಸಿದರು.

ಇದನ್ನೂ ಓದಿ: ಜಗಳೂರು ಪಟ್ಟಣದಲ್ಲಿ ಕುಡಿತ ಬಿಡಿಸಲು ನಡೆದ ಮದ್ಯವರ್ಜನ ಶಿಬಿರದಲ್ಲಿ ಶಾಸಕ ಬಿ. ದೇವೇಂದ್ರಪ್ಪ ಏನು ಮಾಡಿದರು ನೋಡಿ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 26, 2023 03:57 PM