Video: ಪ್ರಸಾದ ವಿಚಾರವಾಗಿ ಜಗಳ, ದೇವಸ್ಥಾನದ ಸೇವಕನನ್ನು ಹೊಡೆದು ಕೊಂದ ಗುಂಪು
ದೇವಸ್ಥಾನದ ವಿಚಾರವಾಗಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಕಲ್ಕಾಜಿ ದೇವಾಲಯದ ಸೇವಕರೊಬ್ಬರನ್ನು ಗುಂಪೊಂದು ಹೊಡೆದು ಕೊಂದ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇವಸ್ಥಾನದ ಸೇವಕ ಹಾಗೂ ಜನರ ನಡುವೆ ಪ್ರಸಾದದ ವಿಚಾರವಾಗಿ ಗಲಾಟೆ ಶುರುವಾಗಿತ್ತು. ದೇವಾಲಯದಲ್ಲಿ ದೇವರ ದರ್ಶನ ಪಡೆದ ನಂತರ ಕೆಲವು ಭಕ್ತರು ಪ್ರಸಾದ ಕೇಳಿದಾಗ ಜಗಳ ಶುರುವಾಗಿತ್ತು.
ನವದೆಹಲಿ, ಆಗಸ್ಟ್ 30: ದೇವಸ್ಥಾನದ ವಿಚಾರವಾಗಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಕಲ್ಕಾಜಿ ದೇವಾಲಯದ ಸೇವಕರೊಬ್ಬರನ್ನು ಗುಂಪೊಂದು ಹೊಡೆದು ಕೊಂದ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇವಸ್ಥಾನದ ಸೇವಕ ಹಾಗೂ ಜನರ ನಡುವೆ ಪ್ರಸಾದದ ವಿಚಾರವಾಗಿ ಗಲಾಟೆ ಶುರುವಾಗಿತ್ತು. ದೇವಾಲಯದಲ್ಲಿ ದೇವರ ದರ್ಶನ ಪಡೆದ ನಂತರ ಕೆಲವು ಭಕ್ತರು ಪ್ರಸಾದ ಕೇಳಿದಾಗ ಜಗಳ ಶುರುವಾಗಿತ್ತು. ನಂತರ ಆರೋಪಿಗಳು ಸೇವಕನನ್ನು ಕೋಲುಗಳಿಂದ ಹೊಡೆದು, ಥಳಿಸಿ ಹತ್ಯೆ ಮಾಡಿದ್ದಾರೆ. ಸಿಸಿಟಿವಿ ದೃಶ್ಯದಲ್ಲಿ ಸೇವಕರು ನೆಲದ ಮೇಲೆ ಪ್ರಜ್ಞಾಹೀನರಾಗಿ ಬಿದ್ದಿರುವುದನ್ನು ಕಾಣಬಹುದು. ಮೃತರನ್ನು ಉತ್ತರ ಪ್ರದೇಶದ ಹಾರ್ದೋಯ್ ಮೂಲದ ಯೋಗೇಂದ್ರ ಸಿಂಗ್ (35) ಎಂದು ಗುರುತಿಸಲಾಗಿದೆ.ಕಳೆದ 15 ವರ್ಷಗಳಿಂದ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

