Guru Sanchara 2026: ಗುರು ಸಂಚಾರ ಧನುಸ್ಸು ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?

Updated on: May 26, 2026 | 1:34 PM

2026ರ ಗುರು ಸಂಚಾರವು ಧನುಸ್ಸು ರಾಶಿಯವರಿಗೆ ಮಿಶ್ರ ಫಲಗಳನ್ನು ತರಲಿದೆ. ಆರಂಭದಲ್ಲಿ ನಿಷ್ಟೂರ, ಅನಗತ್ಯ ಖರ್ಚುಗಳು ಎದುರಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆದರೆ ವಿದ್ಯಾರ್ಥಿಗಳು, ಉದ್ಯೋಗಿಗಳು, ರಾಜಕಾರಣಿಗಳು ಮತ್ತು ಮಹಿಳೆಯರಿಗೆ ಶುಭ. ಕಳ್ಳರ ಭಯದಿಂದ ಎಚ್ಚರವಿರಲಿ. ಗುರುಬಲವಿಲ್ಲದಿದ್ದರೂ ಗ್ರಹಬಲ ನಿಮ್ಮೊಂದಿಗಿರುತ್ತದೆ. ಪರಿಹಾರಗಳನ್ನು ಪಾಲಿಸುವುದು ಉತ್ತಮ.

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಧನುಸ್ಸು ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. 2026ರಲ್ಲಿ ಧನುಸ್ಸು ರಾಶಿಯವರಿಗೆ ಗುರು ಸಂಚಾರವು ಮಿಶ್ರ ಫಲಗಳನ್ನು ತರಲಿದೆ. ರಾಶ್ಯಾಧಿಪತಿ ಗುರು ಎಂಟನೇ ಮನೆಗೆ ಪ್ರವೇಶಿಸುವುದರಿಂದ ಆರಂಭದಲ್ಲಿ ನಿಷ್ಟೂರ, ಅಪವಾದಗಳು ಎದುರಾಗಬಹುದು. ಬಂಧು ಮಿತ್ರರಿಂದ ಮತ್ತು ಕುಟುಂಬದ ಸದಸ್ಯರಿಂದ ಅಪವಾದಗಳು ಹೆಚ್ಚಾಗುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ಅಪರಿಚಿತರೊಂದಿಗೆ ವ್ಯವಹರಿಸುವಾಗ ಜಾಗ್ರತೆ ವಹಿಸಿ. ಆರೋಗ್ಯದ ಕಡೆ ಗಮನವಿರಲಿ.

ಅದೇ ಸಮಯದಲ್ಲಿ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು, ಶಿಕ್ಷಣ ಕ್ಷೇತ್ರದಲ್ಲಿನವರಿಗೆ ಪ್ರಗತಿ ಇರುತ್ತದೆ. ವಿವಾಹ ಯೋಗ ಬಲವಾಗಿದೆ, ವ್ಯಾಪಾರದಲ್ಲಿ ಲಾಭ, ಸರ್ಕಾರಿ ನೌಕರರಿಗೆ ಶುಭಫಲಗಳು ಇವೆ. ರಾಜಕೀಯ ವ್ಯಕ್ತಿಗಳು, ಮಹಿಳೆಯರು ಹಾಗೂ ವಿದೇಶದಿಂದ ಶುಭ ಸುದ್ದಿ ನಿರೀಕ್ಷಿಸಬಹುದು ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More