ಮೈ ತುಂಬಿ ಹರಿಯುತ್ತಿದೆ ಧನುಷ್ ಕೋಟಿ; ಪ್ರವಾಸಿಗರ ಸೆಳೆಯುತ್ತಿದೆ ಚುಂಚನಕಟ್ಟೆ ಫಾಲ್ಸ್
ಕೆ.ಆರ್. ನಗರದ ಚುಂಚನಕಟ್ಟೆ ಬಳಿ ಇರುವ ಧನುಷ್ಕೋಟಿ ಜಲಪಾತ ಮೈ ತುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಮೈಸೂರಿನಲ್ಲಿ ನಿರಂತರ ಮಳೆಗೆ ಮೈಸೂರಿನ ರಿಂಗ್ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದೆ. ಶ್ರೀರಾಂಪುರ, ದಟ್ಟಗಹಳ್ಳಿ ನಡುವೆ ರಿಂಗ್ ರಸ್ತೆ ಕುಸಿದಿದೆ.
ಮೈಸೂರು, ಜುಲೈ.21: ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆ ಹಿನ್ನೆಲೆ ಧನುಷ್ ಕೋಟಿ ಜಲಪಾತ ಭೋರ್ಗರೆಯುತ್ತಿದೆ. ಕೆ.ಆರ್. ನಗರದ ಚುಂಚನಕಟ್ಟೆ ಬಳಿ ಇರುವ ಧನುಷ್ಕೋಟಿ ಜಲಪಾತ ಮೈ ತುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ರುದ್ರ ರಮಣೀಯ ದೃಶ್ಯ ಮೈ ಮನ ಸೆಳೆಯುತ್ತಿದೆ. ರಾಜ್ಯದ ಪ್ರಮುಖ ಜಲಾಪಾತಗಳಲ್ಲಿ ಚುಂಚನಕಟ್ಟೆ ಫಾಲ್ಸ್ ಕೂಡ ಒಂದು.
ಭಾರಿ ಮಳೆಗೆ ಕುಸಿದ ಮೈಸೂರು ರಿಂಗ್ ರಸ್ತೆ
ಮೈಸೂರಿನಲ್ಲಿ ನಿರಂತರ ಮಳೆಗೆ ಮೈಸೂರಿನ ರಿಂಗ್ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದೆ. ಶ್ರೀರಾಂಪುರ, ದಟ್ಟಗಹಳ್ಳಿ ನಡುವೆ ರಿಂಗ್ ರಸ್ತೆ ಕುಸಿದಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಭೂ ಕುಸಿತವಾಗಿರುವ ಸ್ಥಳದಲ್ಲಿ ಹಳೆ ಕಾಲದ ಭಾವಿ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು ದುರಸ್ತಿ ಕಾರ್ಯ ಭರದಿಂದ ಸಾಗಿದ್ದು, ಇನ್ನೂ ನಾಲ್ಕೈದು ದಿನ ಸಂಚಾರ ನಿರ್ಬಂಧ ಮುಂದುವರೆಯುವ ಸಾಧ್ಯತೆಯಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ