AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣದ ವಿಚಾರಕ್ಕೆ ಕಿರಿಕ್: ಧನ್ವೀರ್ ಮಾತನಾಡಿದ ಇನ್ನೊಂದು ಆಡಿಯೋ ವೈರಲ್

ಹಣದ ವಿಚಾರಕ್ಕೆ ಕಿರಿಕ್: ಧನ್ವೀರ್ ಮಾತನಾಡಿದ ಇನ್ನೊಂದು ಆಡಿಯೋ ವೈರಲ್

ಮದನ್​ ಕುಮಾರ್​
|

Updated on: Oct 26, 2026 | 10:10 PM

Share

ನಟ ಧನ್ವೀರ್ ಗೌಡ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವೆ ಯಾವ ಕಾರಣಕ್ಕಾಗಿ ಮನಸ್ತಾಪ ಆಗಿದೆ ಎಂಬುದು ಆರಂಭದಲ್ಲಿ ಸ್ಪಷ್ಟವಾಗಿರಲಿಲ್ಲ. ಹಣದ ವಿಚಾರಕ್ಕಾಗಿ ಕಿರಿಕ್ ಆಗಿಲ್ಲ ಎಂದು ಹೇಳಲಾಗಿತ್ತು. ಆದರೆ ಈಗ ಒಂದು ಆಡಿಯೋ ವೈರಲ್ ಆಗಿದೆ. ಅದರಲ್ಲಿ ಧನ್ವೀರ್ ಅವರೇ ಹಣದ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.

ನಟ ಧನ್ವೀರ್ ಗೌಡ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವೆ ಯಾವ ಕಾರಣಕ್ಕಾಗಿ ಮನಸ್ತಾಪ ಆಗಿದೆ ಎಂಬುದು ಆರಂಭದಲ್ಲಿ ಸ್ಪಷ್ಟವಾಗಿರಲಿಲ್ಲ. ಹಣದ ವಿಚಾರಕ್ಕಾಗಿ ಕಿರಿಕ್ ಆಗಿಲ್ಲ ಎಂದು ಹೇಳಲಾಗಿತ್ತು. ಆದರೆ ಈಗ ಒಂದು ಆಡಿಯೋ ವೈರಲ್ ಆಗಿದೆ. ಅದರಲ್ಲಿ ಧನ್ವೀರ್ ಅವರೇ ಹಣದ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ವೈರಲ್ ಆಡಿಯೋದಲ್ಲಿ ಪ್ರಸ್ತಾಪ ಆಗಿರುವುದನ್ನು ಗಮನಿಸಿದರೆ ಮನಸ್ತಾಪಕ್ಕೆ ಹಣದ ವಿಷಯವೇ ಕಾರಣ ಎಂಬುದು ಸ್ಪಷ್ಟವಾಗಿದೆ. ‘ಅವರು ಫೋನ್ ಮಾಡಿ ದುಡ್ಡು ಕೇಳಿದರೆ ಬಾಗಿಲಿಗೆ ಎಸೆದು ಬರುತ್ತೇನೆ. ಆಯಮ್ಮನ ಬಳಿ ನನ್ನ ನಂಬರ್ ಇದೆ. ಫೋನ್ ಮಾಡಿ ಕೇಳಬಹುದಲ್ಲ. ನಾನು ಯಾರ ಮನೆಯ ಜೀತದ ಆಳು ಅಲ್ಲ. ನಾನು ದುಡ್ಡು ಕೊಡಲ್ಲ ಅಂತ ಹೇಳಿಯೇ ಇಲ್ಲ’ ಎಂದು ಧನ್ವೀರ್ ಅವರು ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಇಂಥ ಹಲವು ಆಡಿಯೋ ಕ್ಲಿಪ್​ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆ ಮೂಲಕ ವಿವಾದ ಇನ್ನಷ್ಟು ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More