Dharmasathala Case: ನಿರ್ಮಲಾನಂದನಾಥ ಶ್ರೀ ಭೇಟಿಯಾಗಿದ್ದ ಬುರುಡೆ ಗ್ಯಾಂಗ್, ಸಾಕ್ಷಿ ಪತ್ತೆ

Updated on: Dec 10, 2025 | 8:40 PM

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಅಂತಾ ಬಂದಿದ್ದ ಚಿನ್ನಯ್ಯ ಬೇಲ್​ ಸಿಕ್ಕರೂ ಜೈಲಿನಲ್ಲೇ ಇದ್ದಾನೆ. ಮತ್ತೊಂದ್ಕಡೆ ನವೆಂಬರ್ 20ರಂದು SIT 3923 ಪುಟಗಳ ತನಿಖಾ ವರದಿಯನ್ನ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ಕೋರ್ಟ್​ಗೆ ಸಲ್ಲಿಸಿದೆ.. ವರದಿಯಲ್ಲಿ ಧರ್ಮಸ್ಥಳದ ವಿರುದ್ಧ ಬುರುಡೆ ಗ್ಯಾಂಗ್ ನಡೆಸಿದ ಷಡ್ಯಂತ್ರ ಬಯಲಾಗಿದೆ.. ಚಿನ್ನಯ್ಯ, ಮಹೇಶ್​ ಶೆಟ್ಟಿ ತಿಮರೋಡಿ, ವಿಠ್ಠಲಗೌಡ, ಗಿರೀಶ್​ ಮಟ್ಟಣನವರ್​, ಟಿ.ಜಯಂತ್​ ಹಾಗೂ ಸುಜಾತಾ ಭಟ್​​ ಈ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಅಂತಾ SIT ತನಿಖೆಯಲ್ಲಿ ದೃಢಪಟ್ಟಿದೆ.

ಮಂಗಳೂರು, (ಡಿಸೆಂಬರ್ 10): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಅಂತಾ ಬಂದಿದ್ದ ಚಿನ್ನಯ್ಯ ಬೇಲ್​ ಸಿಕ್ಕರೂ ಜೈಲಿನಲ್ಲೇ ಇದ್ದಾನೆ. ಮತ್ತೊಂದ್ಕಡೆ ನವೆಂಬರ್ 20ರಂದು SIT 3923 ಪುಟಗಳ ತನಿಖಾ ವರದಿಯನ್ನ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ಕೋರ್ಟ್​ಗೆ ಸಲ್ಲಿಸಿದೆ.. ವರದಿಯಲ್ಲಿ ಧರ್ಮಸ್ಥಳದ ವಿರುದ್ಧ ಬುರುಡೆ ಗ್ಯಾಂಗ್ ನಡೆಸಿದ ಷಡ್ಯಂತ್ರ ಬಯಲಾಗಿದೆ.. ಚಿನ್ನಯ್ಯ, ಮಹೇಶ್​ ಶೆಟ್ಟಿ ತಿಮರೋಡಿ, ವಿಠ್ಠಲಗೌಡ, ಗಿರೀಶ್​ ಮಟ್ಟಣನವರ್​, ಟಿ.ಜಯಂತ್​ ಹಾಗೂ ಸುಜಾತಾ ಭಟ್​​ ಈ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಅಂತಾ SIT ತನಿಖೆಯಲ್ಲಿ ದೃಢಪಟ್ಟಿದೆ.

ಇನ್ನು ಈ ಬುರಡೆ ಗ್ಯಾಂಗ್, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ಮಾಡಿದ್ದು ಇದೀಗ ಬಯಲಾಗಿದೆ. ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ ಭೇಟಿಯ ವೇಳೆ ಸ್ವಾಮೀಜಿ ಬಳಿ ಬುರುಡೆ ಕಥೆ ಹೇಳಿತ್ತಂತೆ. ಜತೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ಶ್ರೀಗಳಿಗೆ ಮನವಿ ಮಾಡಿದ್ದರು ಎನ್ನುವುದು ಗೊತ್ತಾಗಿದ್ದು, ಸ್ವಾಮೀಜಿ ಭೇಟಿ ಮಾಡಿರುವ ಫೋಟೋ ಸಹ ಲಭ್ಯವಾಗಿದೆ.