ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು: ಬಂಗ್ಲೆಗುಡ್ಡ ಬಳಿ ಮೂಳೆಗಳು ಪತ್ತೆ‌

Edited By:

Updated on: Sep 17, 2025 | 2:09 PM

ಎಲ್ಲವೂ ಮುಗಿದೋಯ್ತು ಅಂದುಕೊಂಡಾಗಲೇ ಹೊಸ ಅದ್ಯಾಯ ಶುರುವಾಗಿದೆ. ಧರ್ಮಸ್ಥಳದ ಬುರುಡೆ ಮತ್ತು ಅಸ್ಥಿಪಂಜರ ಶೋಧ ಪ್ರಕರಣ ಹೊಸ ದಿಕ್ಕಿಗೆ ಬಂದು ನಿಂತಿದೆ. ಯಾವ ಸ್ಥಳದಲ್ಲಿ 17 ಗುಂಡಿ ತೋಡಿ ಏನು ಸಿಗದೇ ಇದ್ದಾಗ ವಿಚಾರಣೆ ಆರಂಭಿಸಿತ್ತು. ಇದೀಗ ಅದೇ ಎಸ್​ಐಟಿ ಮತ್ತೆ ಬಂಗ್ಲೆಗುಡ್ಡದ ಕಾಡಿಗೆ ಬಂದು ನಿಂತಿದೆ. ಶವಗಳ ಶೋಧಕ್ಕೆ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದು, ಈ ವೇಳೆ ಮೂಳೆಗಳು ಪತ್ತೆಯಾಗಿವೆ.

ಮಂಗಳೂರು, (ಸೆಪ್ಟೆಂಬರ್ 17): ಎಲ್ಲವೂ ಮುಗಿದೋಯ್ತು ಅಂದುಕೊಂಡಾಗಲೇ ಹೊಸ ಅದ್ಯಾಯ ಶುರುವಾಗಿದೆ. ಧರ್ಮಸ್ಥಳದ ಬುರುಡೆ ಮತ್ತು ಅಸ್ಥಿಪಂಜರ ಶೋಧ ಪ್ರಕರಣ ಹೊಸ ದಿಕ್ಕಿಗೆ ಬಂದು ನಿಂತಿದೆ. ಯಾವ ಸ್ಥಳದಲ್ಲಿ 17 ಗುಂಡಿ ತೋಡಿ ಏನು ಸಿಗದೇ ಇದ್ದಾಗ ವಿಚಾರಣೆ ಆರಂಭಿಸಿತ್ತು. ಇದೀಗ ಅದೇ ಎಸ್​ಐಟಿ ಮತ್ತೆ ಬಂಗ್ಲೆಗುಡ್ಡದ ಕಾಡಿಗೆ ಬಂದು ನಿಂತಿದೆ. ಶವಗಳ ಶೋಧಕ್ಕೆ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದು, ಈ ವೇಳೆ ಮೂಳೆಗಳು ಪತ್ತೆಯಾಗಿವೆ.

ಹೌದು.. ಎಸ್​ಐಟಿ ಶೋಧದ ವೇಳೆ ಅಲ್ಪಸ್ವಲ್ಪ ಮೂಳೆಗಳು ಪತ್ತೆಯಾಗಿವೆ. ಸೋಕೋ ತಂಡ ಮೂಳೆ ಪತ್ತೆಯಾದ ಭಾಗದ ಮಣ್ಣಿನ ಸ್ಯಾಂಪಲ್ ಪಡೆದಿದ್ದು, ಈ ಜಾಗವನ್ನ ಎಸ್ಐಟಿ ಮಹಜರು ಮಾಡುತ್ತಿದೆ. ಭೂಮಿಯ ಮೇಲ್ಭಾಗದಲ್ಲಿದ್ದ ಬಟ್ಟೆ ತುಂಡುಗಳು ಕೂಡ ಸಿಕ್ಕಿವೆ. ವಿಠ್ಠಲ್​ಗೌಡನ ಹೇಳಿಕೆ, ಮೂಳೆ ಸಿಕ್ಕಿರೋ ಬೆಳವಣಿಗೆ ಪ್ರಕರಣದ ಕುತೂಹಲ ಹೆಚ್ಚಿಸಿದೆ.