ಧರ್ಮಸ್ಥಳ ಕೇಸ್​: ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟಿದ್ದೇ ಸೌಜನ್ಯ ಮಾವ ವಿಠ್ಠಲ ಗೌಡ!

Updated By: ಗಂಗಾಧರ​ ಬ. ಸಾಬೋಜಿ

Updated on: Sep 06, 2025 | 7:37 PM

ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಹೊಸ ತಿರುವು ಪಡೆದಿದೆ. ಆರೋಪಿ ಚಿನ್ನಯ್ಯನಿಗೆ ಬುರುಡೆಯನ್ನು ಸೌಜನ್ಯ ಮಾವ ವಿಠಲ ಗೌಡ ನೀಡಿದ್ದಾರೆ ಎನ್ನಲಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ಎಸ್‌ಐಟಿಯಿಂದ ವಿಠಲ್ ಗೌಡ ಅರೆಸ್ಟ್​ ಸಾಧ್ಯತೆ ಇದೆ. ಚಿನ್ನಯ್ಯ ಹಾಗೂ ವಿಠಲ್​ ಗೌಡಗೆ ಹಳೆಯ ಸ್ನೇಹ ಸಂಬಂಧ ಇದೆ ಎನ್ನಲಾಗುತ್ತಿದೆ.

ಮಂಗಳೂರು, ಸೆಪ್ಟೆಂಬರ್​ 06: ಬುರುಡೆ ಹಿಡಿದುಕೊಂಡು ಕೋರ್ಟ್‌ಗೆ ಬಂದಿದ್ದ ಚಿನ್ನಯ್ಯ ಎರಡು ತಿಂಗಳು ಬುರುಡೆ ಬಿಟ್ಟಿದ್ದ. ಚಿನ್ನಯ್ಯನಿಗೆ ಬುರುಡೆ ಕೊಟ್ಟಿದ್ಯಾರು? ಬುರುಡೆ ಎಲ್ಲಿಂದ ಬಂತು ಅಂತಾ ಎಸ್ಐಟಿ ಅಧಿಕಾರಿಗಳು ಬಿಸಿನೀರು ಕಾಯಿಸಿದಾಗ ಬುರುಡೆ ರಹಸ್ಯ ಬಯಲಾಗಿದೆ. ಚಿನ್ನಯ್ಯನಿಗೆ ಬುರುಡೆ ತಂದು ಕೊಟ್ಟಿದ್ದೇ ಸೌಜನ್ಯಾ ಮಾವ ವಿಠಲ್ ಗೌಡ ಎನ್ನಲಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ಎಸ್‌ಐಟಿಯಿಂದ ವಿಠಲ್ ಗೌಡ ಅರೆಸ್ಟ್​ ಸಾಧ್ಯತೆ ಇದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.