ಎತ್ತುಗಳನ್ನು ಅಪಾರವಾಗಿ ಪ್ರೀತಿಸುವ ರೈತ ಈರಪ್ಪ ಉಳವಿ ಜಾತ್ರೆಗೆ ಅವುಗಳನ್ನು ಬೆಳ್ಳಿ ಬಂಗಾರದಿಂದ ಸಿಂಗರಿಸುತ್ತಾರೆ!
ಸುಮಾರು 18 ವರ್ಷಗಳ ಹಿಂದೆ ಬಡತನದಲ್ಲಿದ್ದ ಈರಪ್ಪ ಅರಳಿಕಟ್ಟಿ ಬೇರೆಯವರಂತೆ ಬಸ್ಸಲ್ಲಿಯೇ ಉಳವಿ ಜಾತ್ರೆಗೆ ಹೋಗುತ್ತಿದ್ದರಂತೆ. ಆದರೆ ಬೇರೆಯವರು ಚಕ್ಕಡಿಗಳಲ್ಲಿ ಬರುವುದನ್ನು ಕಂಡು ತಾನೂ ಚಕ್ಕಡಿಯಲ್ಲೇ ಹೋಗುವ ಸಂಕಲ್ಪ ಮಾಡಿಕೊಂಡಿದ್ದಾರೆ. ಉಳುಮೆ, ದುಡಿಮೆಯಲ್ಲಿ ಸದಾ ನೆರಳಿನಂತಿರುವ ತನ್ನ ಎತ್ತುಗಳಿಗೆ ಅವರು ಮಾನವರಿಗೆ ತೊಡಿಸುವಂತೆ ಅಭರಣಗಳನ್ನು ತೊಡಿಸಿ ಚಕ್ಕಡಿಯಲ್ಲಿ ಮೆರವಣಿಗೆಯೊಂದಿಗೆ ಉಳವಿ ಜಾತ್ರೆಗೆ ಹೋಗುತ್ತಾರೆ.
ಧಾರವಾಡ: ತನ್ನ ಹೊಲದಲ್ಲಿ ದುಡಿಮೆ ಮಾಡುವ ಎತ್ತುಗಳನ್ನು ಈ ಪಾಟಿ ಪ್ರೀತಿಸುವ ಮತ್ತು ಆದರಿಸುವ ರೈತನನ್ನು ಪ್ರಾಯಶಃ ಬೇರೆಲ್ಲೂ ಕಾಣಲಾರಿರಿ. ಜಿಲ್ಲೆಯ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ರೈತ ಈರಪ್ಪ ಅರಳಿಕಟ್ಟಿ
ಉಳವಿಯಲ್ಲಿ ನಡೆಯುವ ಜಾತ್ರೆಗೆ ತಮ್ಮ ಚಕ್ಕಡಿಯಲ್ಲೇ ಹೋಗುತ್ತಾರೆ ಮತ್ತು ಬಂಡಿಯನ್ನು ಎಳೆಯುವ ತಮ್ಮ ಎತ್ತುಗಳಿಗೆ ಬೆಳ್ಳಿ ಬಂಗಾರದ ಆಭರಣಗಳಿಂದ ಸಿಂಗರಿಸುತ್ತಾರೆ. ಎತ್ತುಗಳಿಗೆ ಅವರು ಅರ್ಧ ಕೆಜಿ ಬೆಳ್ಳಿಯ 4 ಕಡಗ,
15 ತೊಲೆ ಬೆಳ್ಳಿಯಲ್ಲಿ ಮಾಡಿಸಿದ 4 ಕೋಡೆಣಸ್ ಹಾಗೂ ಅವುಗಳ ಕೋಡುಗಳಿಗೆ 21 ತೊಲೆಯಲ್ಲಿ ಮಾಡಿಸಿರುವ 4 ಚಿನ್ನದ ಕೋಡೆಣಸ್ ಆಭರಣಗಳನ್ನು ಹಾಕಿ ಜಾತ್ರೆಗೆ ಕರೆದೊಯ್ಯುತ್ತಾರೆ. ದಾರಿಯುದ್ದಕ್ಕೂ ಡೋಲು ದಮ್ಮಡಿ ಬಾರಿಸುತ್ತ, ಕುಣಿಯುತ್ತ ಎತ್ತುಗಳ ಮೆರವಣಿಗೆಯೂ ನಡೆಯುತ್ತದೆ. ಇವರು ಜಾತ್ರೆಗೆ ಹೋಗುವ ಸಂಭ್ರಮವನ್ನು ಕಣ್ಣಾರೆ ನೋಡಿ ಅನಂದಿಸಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು ಕರಗಕ್ಕೆ ಕಾಮಗಾರಿಗಳ ಅಡ್ಡಿ: ರಥೋತ್ಸವ ಎಲ್ಲಾ ರಸ್ತೆಯಲ್ಲಿ ಹೋಗೋದು ಡೌಟ್