ಧಾರವಾಡ: ಕ್ಯಾಪ್ಟನ್ ಪ್ರಾಂಜಲ್ ನೆನೆದು ತಾಯಿ ಕಣ್ಣೀರು; ಇಲ್ಲಿದೆ ಮನಕಲಕುವ ವಿಡಿಯೋ
ಇಂದು(ಮಾ.07) ಧಾರವಾಡ(Dharwad) ಜಿಲ್ಲಾಧಿಕಾರಿ ಕಚೇರಿ ಬಳಿಯ ಕಾರ್ಗಿಲ್ ಸ್ತೂಪಕ್ಕೆ ಕ್ಯಾಪ್ಟನ್ ಪ್ರಾಂಜಲ್ ಕುಟುಂಬ ಭೇಟಿ ನೀಡಿ ಹುತಾತ್ಮ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು. ಈ ವೇಳೆ ಮಗ ಕ್ಯಾಪ್ಟನ್ ಪ್ರಾಂಜಲ್ ನೆನೆದು ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ಅವರು ಭಾವುಕರಾಗಿದ್ದಾರೆ.
ಧಾರವಾಡ, ಮಾ.07: ನವೆಂಬರ್ 22ರಂದು ಉಗ್ರರೊಂದಿಗಿನ ಸೆಟಸಾಟದಲ್ಲಿ ಕ್ಯಾಪ್ಟನ್ ಪ್ರಾಂಜಲ್(Captain Pranjal) ಹುತಾತ್ಮರಾಗಿದ್ದರು. ಇಂದು(ಮಾ.07) ಧಾರವಾಡ(Dharwad) ಜಿಲ್ಲಾಧಿಕಾರಿ ಕಚೇರಿ ಬಳಿಯ ಕಾರ್ಗಿಲ್ ಸ್ತೂಪಕ್ಕೆ ಕ್ಯಾಪ್ಟನ್ ಪ್ರಾಂಜಲ್ ಕುಟುಂಬ ಭೇಟಿ ನೀಡಿ ಹುತಾತ್ಮ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು. ಈ ವೇಳೆ ಮಗ ಕ್ಯಾಪ್ಟನ್ ಪ್ರಾಂಜಲ್ ನೆನೆದು ತಂದೆ ವೆಂಕಟೇಶ್ ಮತ್ತು ತಾಯಿ ಅನುರಾಧ ಅವರು ಭಾವುಕರಾಗಿದ್ದಾರೆ. ಈ ವೇಳೆ ಮಾತನಾಡಿ, ‘ನಮಗೆ ಈಗ ಮಗನ ಆಸರೆ ಇಲ್ಲ. ಆದರೆ, ಸಮಾಜವೇ ನಮಗೆ ಆಸರೆಯಾಗಿ ನಿಂತಿದೆ. ಸಮಾಜ ಈಗ ನಮ್ಮೊಂದಿಗೆ ಇದೆ ಎಂದು ಪ್ರಾಂಜಲ್ ತಂದೆ ವೆಂಕಟೇಶ್ ಭಾವುಕರಾದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ