Video: ರೈತನ ನ್ಯೂ ಮ್ಯಾರೇಜ್ ಸ್ಟೈಲ್: ಎತ್ತಿನಬಂಡಿ ಏರಿ ಬಂದ ನವಜೋಡಿ
ಚಕ್ಕಡಿಯನ್ನು ಲೈಟ್ಸ್‌ಗಳಿಂದ ಅಲಂಕರಿಸಿ, ಎತ್ತುಗಳನ್ನು ಶೃಂಗರಿಸಿ ಇಬ್ಬರು ನವಜೋಡಿಗಳು ಗ್ರಾಮದ ತುಂಬ ಮೆರವಣಿಗೆ ಮಾಡಿದ್ದಾರೆ.
ಧಾರವಾಡ: ಮದುವೆ (marriage) ಅಂದಮೇಲೆ ಡಿಜೆ, ಡ್ಯಾನ್ಸ್ ಇದು ಕಾಮನ್. ಈ ಎಲ್ಲ ಆಡಂಬರಗಳ ನಡುವೆ ನಾವೆಲ್ಲ ಹಳೇ ಸಂಪ್ರದಾಯವನ್ನೇ ಮರೆತು ಬಿಟ್ಟಿದ್ದೇವೆ. ಅಂತದರಲ್ಲಿ ಇಲ್ಲೊಬ್ಬ ಯುವ ರೈತ ತನ್ನ ಮದುವೆಯನ್ನು ದಶಕಗಳ ಸಂಪ್ರದಾಯಕವಾಗಿ ಮಾಡಿಕೊಂಡು ಸ್ಪೂರ್ತಿಯಾಗಿದ್ದಾನೆ. ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಇಂತದೊಂದು ಮರೆತು ಹೋಗಿರುವ ವಿಶಿಷ್ಟ ಆಚರಣೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ. ಪ್ರವೀಣ ಹಾಗೂ ವಿದ್ಯಾ ಎಂಬ ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಕ್ಕಡಿಯನ್ನು ಲೈಟ್ಸ್‌ಗಳಿಂದ ಅಲಂಕರಿಸಿ, ಎತ್ತುಗಳನ್ನು ಶೃಂಗರಿಸಿ ಇಬ್ಬರು ನವಜೋಡಿಗಳು ಗ್ರಾಮದ ತುಂಬ ಮೆರವಣಿಗೆ ಮಾಡಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.