Priyank Kharge; ಬಿಜೆಪಿಯಂತೆ ನಾವು ಭರವಸೆಯಲ್ಲ, ಗ್ಯಾರಂಟಿಗಳನ್ನು ನೀಡಿದ್ದೇವೆ: ಪ್ರಿಯಾಂಕ್ ಖರ್ಗೆ, ಸಚಿವರು
ಶುಕ್ರವಾರ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಲಿದ್ದಾರೆ ಎಂದು ಖರ್ಗೆ ಹೇಳಿದರು.
ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ವೋಟು ನೀಡಿ ಅಧಿಕಾರಕ್ಕೆ ತಂದ ಜನ ಗ್ಯಾರಂಟಿಗಳ ಬಗ್ಗೆ ಮಾತಾಡುತ್ತಿಲ್ಲ, ಸರ್ಕಾರ ಮೊದಲು ಕದುರಿಕೊಳ್ಳಲಿ ಅಂತ ಸಮಯಾವಕಾಶ ನೀಡಿದ್ದ್ದಾರೆ, ಆದರೆ ಬಿಜೆಪಿ ಮತ್ತು ಜೆಡಿಎಸ್ ಜನರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ (RDPR minister) ಪ್ರಿಯಾಂಕ್ ಖರ್ಗೆ (Priyank Kharge) ಇಂದು ಬೆಂಗಳೂರಲ್ಲಿ ಹೇಳಿದರು. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರನೊಂದಿಗೆ ಮಾತಾಡಿದ ಸಚಿವರು, ಬಿಜೆಪಿಯಂತೆ ನಾವು ಭರವಸೆಗಳನ್ನು ನೀಡಿಲ್ಲ, ಗ್ಯಾರಂಟಿಗಳನ್ನು (guarantees) ನೀಡಿದ್ದೇವೆ, ಅವುಗಳನ್ನು ಜಾರಿ ಮಾಡುವುದು ಶತಸಿದ್ಧ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ನಾವು ನೀಡಿದ ಗ್ಯಾರಂಟಿಗಳಿಗೆ ಮೊದಲ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದ್ದೇವೆ, ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿಯನ್ನು ಕಲೆಹಾಕಿದ್ದೇವೆ, ಶುಕ್ರವಾರ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಲಿದ್ದಾರೆ ಎಂದು ಖರ್ಗೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ