Boat capsizes near Honnavar: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ, ಅದರಲ್ಲಿದ್ದ ನಾಲ್ವರು ಮೀನುಗಾರರ ರಕ್ಷಣೆ
ತಿರಂಗಾ ಹೆಸರಿನ ಬೋಟನ್ನು ಹೊನ್ನಾವರದ ಕಾಸರಕೋಡಿನಿಂದ ಬೇಲೇಕೇರಿಗೆ ರಿಪೇರಿಗೆ ಅಂತ ನಾವೆಯನ್ನು ತೆಗೆದುಕೊಂಡು ಹೋಗುವಾಗ ದುರ್ಘಟನೆ ಜರುಗಿದೆ.
ಕಾರವಾರ: ಜಿಲ್ಲೆಯ ಹೊನ್ನಾವರಕ್ಕೆ ಹತ್ತಿರದ ಅಳಿವೆ ಬಳಿ ಅರಬ್ಬೀ ಸಮುದ್ರದಲ್ಲಿ (Arabian Sea) ಮೀನುಗಾರಿಕೆಗೆ ಬಳಸುವ ನಾವೆಯೊಂದು ಮುಗುಚಿದ (capsized) ಘಟನೆ ಇಂದು ಮಧ್ಯಾಹ್ನ ಜರುಗಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಬೇಲೇಕೇರಿ ನಿವಾಸಿ ಕೃಷ್ಣ (Krishna) ಹೆಸರಿನ ವ್ತಕ್ತಿಗೆ ಬೋಟ್ ಸೇರಿತ್ತು. ತಿರಂಗಾ ಹೆಸರಿನ ಬೋಟನ್ನು ಹೊನ್ನಾವರದ ಕಾಸರಕೋಡಿನಿಂದ ಬೇಲೇಕೇರಿಗೆ ರಿಪೇರಿಗೆ ಅಂತ ನಾವೆಯನ್ನು ತೆಗೆದುಕೊಂಡು ಹೋಗುವಾಗ ದುರ್ಘಟನೆ ಜರುಗಿದೆ. ಬೋಟ್ ನಲ್ಲಿದ್ದ 4 ಜನ ಮೀನುಗಾರರನ್ನು ರಕ್ಷಿಸಿ ಮತ್ತೊಂದು ಬೋಟ್ ನಲ್ಲಿ ತರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಬೋಟ್ ಮಾಲೀಕ ಕೃಷ್ಣ ಹೇಳುವ ಪ್ರಕಾರ ಅದರ ಮುಳುಗಡೆಯಿಂದ ರೂ. 20 ಲಕ್ಷ ನಷ್ಟವುಂಟಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾನು-ರಾಗಿಣಿ ಜೋಡಿ ಅಲ್ಲ: ಎಲ್ಲರ ಎದುರು ಸ್ಪಷ್ಟಪಡಿಸಿದ ಧರ್ಮ ಕೀರ್ತಿರಾಜ್

ಯುದ್ಧದ ಭೀತಿ; ಎಲ್ಒಸಿಗೆ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭೇಟಿ?

ಧೋನಿ ಸೇರಿದಂತೆ ಒಂದೇ ಓವರ್ನಲ್ಲಿ 4 ವಿಕೆಟ್ ಉರುಳಿಸಿದ ಚಾಹಲ್

ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
