ಸೆಟ್ಟೇರಿದ ಧ್ರುವ ಸರ್ಜಾ ಹೊಸ ಚಿತ್ರ ‘ಮಾರ್ಟಿನ್’; ಶುಭ ಹಾರೈಸಿದ ರವಿಚಂದ್ರನ್​
ಸೆಟ್ಟೇರಿದ ಧ್ರುವ ಸರ್ಜಾ ಹೊಸ ಚಿತ್ರ ‘ಮಾರ್ಟಿನ್’; ಶುಭ ಹಾರೈಸಿದ ರವಿಚಂದ್ರನ್​

ಸೆಟ್ಟೇರಿದ ಧ್ರುವ ಸರ್ಜಾ ಹೊಸ ಚಿತ್ರ ‘ಮಾರ್ಟಿನ್’; ಶುಭ ಹಾರೈಸಿದ ರವಿಚಂದ್ರನ್​

| Updated By: ರಾಜೇಶ್ ದುಗ್ಗುಮನೆ

Updated on: Aug 15, 2021 | 4:25 PM

ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ತೆರೆ ಕಂಡು ಹಲವು ತಿಂಗಳು ಕಳೆದಿವೆ. ಈಗ ‘ಮಾರ್ಟಿನ್’ ಆಗಿ ಧ್ರುವ ಸರ್ಜಾ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.

ಧ್ರುವ ಸರ್ಜಾ ಅವರ ಹೊಸ ಸಿನಿಮಾ ಯಾವಾಗ ಸೆಟ್ಟೇರಲಿದೆ ಎನ್ನುವ ಕುತೂಹಲ ಅಭಿಮಾನಿಗಳದ್ದಾಗಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಎ.ಪಿ. ಅರ್ಜುನ್​ ಮತ್ತು ಧ್ರುವ ಸರ್ಜಾ ಕಾಂಬಿನೇಷನ್​ನಲ್ಲಿ ಮಾರ್ಟಿನ್ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಮುಹೂರ್ತ ನೆರವೇರಿದೆ. ಈ ಸಿನಿಮಾ ಕಾರ್ಯಕ್ರಮಕ್ಕೆ ಕ್ರೇಜಿ ಸ್ಟಾರ್​ ರವಿಚಂದ್ರನ್​ ಆಗಮಿಸಿದ್ದರು.

ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ತೆರೆ ಕಂಡು ಹಲವು ತಿಂಗಳು ಕಳೆದಿವೆ. ಈಗ ‘ಮಾರ್ಟಿನ್’ ಆಗಿ ಧ್ರುವ ಸರ್ಜಾ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಧ್ರುವ ಅವರ ಐದನೇ ಸಿನಿಮಾ ಇದಾಗಿದೆ. ಚಿತ್ರದ ಪಾತ್ರವರ್ಗದ ಮಾಹಿತಿ ಇನ್ನಷ್ಟೇ  ಅಧಿಕೃತವಾಗಬೇಕಿದೆ.

ಇದನ್ನೂ ಓದಿ: ‘ದುಬಾರಿ ಸಿನಿಮಾ ಖಂಡಿತಾ ಮಾಡ್ತೀವಿ’; ಜೊತೆಯಾಗಿ ನಿಂತು ಸ್ಪಷ್ಟನೆ ನೀಡಿದ ಧ್ರುವ ಸರ್ಜಾ-ನಂದಕಿಶೋರ್​

Published on: Aug 15, 2021 04:25 PM