ಮುಂಬೈನಿಂದ ‘ಮಾರ್ಟಿನ್’ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮದ ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬಂದಿರುವ ‘ಮಾರ್ಟಿನ್’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದೆ. ಮುಂಬೈನಲ್ಲಿ ಅದ್ದೂರಿಯಾಗಿ ಆಯೋಜನೆಗೊಂಡ ಇವೆಂಟ್ನ ಲೈವ್ ವಿಡಿಯೋ ಇಲ್ಲಿದೆ ನೋಡಿ.. ಧ್ರುವ ಸರ್ಜಾ ಅವರು ಮುಖ್ಯ ಭೂಮಿಕೆ ನಿಭಾಯಿಸಿದ ಈ ಸಿನಿಮಾಗೆ ಎ.ಪಿ. ಅರ್ಜುನ್ ನಿರ್ದೇಶನ ಮಾಡಿದ್ದಾರೆ.
‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರು ಅಭಿನಯಿಸಿರುವ ‘ಮಾರ್ಟಿನ್’ ಸಿನಿಮಾ ಬಿಡುಗಡೆಗೆ ಹತ್ತಿರ ಆಗುತ್ತಿದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇಂದು (ಆಗಸ್ಟ್ 5) ಮುಂಬೈನಲ್ಲಿ ಬಹಳ ಗ್ರ್ಯಾಂಡ್ ಆಗಿ ಟ್ರೇಲರ್ ಲಾಂಚ್ ಮಾಡಲಾಗುತ್ತಿದೆ. ಹಲವು ರಾಜ್ಯಗಳು ಹಾಗು ವಿದೇಶದ ಪತ್ರಕರ್ತರನ್ನು ಆಹ್ವಾನಿಸಿ ಅವರೆಲ್ಲರ ಸಮ್ಮುಖದಲ್ಲಿ‘ಮಾರ್ಟಿನ್’ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಮಾಡಲಾಗುತ್ತಿದೆ. ಧ್ರುವ ಸರ್ಜಾ, ಎ.ಪಿ. ಅರ್ಜುನ್ ಹಾಗೂ ಚಿತ್ರತಂಡದ ಅನೇಕರು ಈ ಇವೆಂಟ್ನಲ್ಲಿ ಭಾಗಿ ಆಗಿದ್ದಾರೆ. ಟ್ರೇಲರ್ ರಿಲಿಸ್ ಕಾರ್ಯಕ್ರಮದ ಲೈವ್ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Aug 05, 2024 05:00 PM