ನಾವು ಸಿನಿಮಾ ಹೀರೋ, ಇವರೇ ನಿಜವಾದ ಹೀರೋ: ಹೆಮ್ಮೆಯ ಕನ್ನಡತಿ ಬಗ್ಗೆ ಧ್ರುವ ಸರ್ಜಾ ಮಾತು

Updated on: Feb 22, 2025 | 8:28 PM

ಇಡೀ ನಾಡನ್ನು ಹಸಿರಾಗಿಸಲು ಪರಿಸರ ಪ್ರೇಮಿ ಸರಸ್ವತಿ ಅವರು ಮಾಡಿದ ಕೆಲಸವನ್ನು ಗುರುತಿಸಲಾಗಿದೆ. ಅವರಿಗೆ ಹೆಮ್ಮೆಯ ಕನ್ನಡತಿ ಪ್ರಶಸ್ತಿ ನೀಡಲಾಗಿದೆ. ಈ ವೇಳೆ ಸಾಧಕಿ ಸರಸ್ವತಿ ಅವರು ಮಾತನಾಡಿದರು. ಅವರಿಗೆ ಈ ಪ್ರಶಸ್ತಿ ನೀಡಿದ ಟಿವಿ9 ವಾಹಿನಿಗೆ ಶರವಣನ್ ಮತ್ತು ಧ್ರುವ ಸರ್ಜಾ ಅವರು ಧನ್ಯವಾದ ಹೇಳಿದ್ದಾರೆ.

ಪರಿಸರ ಪ್ರೇಮಿ ಸರಸ್ವತಿ ಅವರಿಗೆ ‘ಟಿವಿ9 ಹೆಮ್ಮೆಯ ಕನ್ನಡತಿ’ ಪ್ರಶಸ್ತಿ ಸಿಕ್ಕಿದೆ. ಈ ವೇದಿಕೆಯಲ್ಲಿ ನಟ ಧ್ರುವ ಸರ್ಜಾ ಅವರು ಮಾತನಾಡಿದ್ದಾರೆ. ‘ಹೆಮ್ಮೆಯ ಕನ್ನಡತಿ ಎಂದರೆ.. ನಾವು ತೆರೆ ಮೇಲೆ ಮಾತ್ರ ಹೀರೋ. ರಿಯಲ್ ಲೈಫ್​ನಲ್ಲಿ ಇವರೇ ಹೀರೋ. ಇಂಥ ಕಾರ್ಯಕ್ರಮ ಮಾಡಿ ಪ್ರೋತ್ಸಾಹ ನೀಡುತ್ತಿರುವ ಟಿವಿ9 ವಾಹಿನಿಗೆ ಆಲ್​ ದಿ ಬೆಸ್ಟ್​’ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ‘ಕೆಡಿ’ ಸಿನಿಮಾದ ಡೈಲಾಗ್ ಕೂಡ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More