ಧ್ರುವ ಸರ್ಜಾ ಜಿಮ್ ಟ್ರೈನರ್ ಮೇಲೆ ಹಲ್ಲೆ; ‘ನಮ್ಮ ಹುಡುಗ, ಜೊತೆಗೆ ಇರುತ್ತೇನೆ’ ಎಂದ ನಟ

Edited By:

Updated on: May 27, 2024 | 12:47 PM

ಧ್ರುವ ಸರ್ಜಾ ಜಿಮ್ ಟ್ರೇನರ್ ಪ್ರಶಾಂತ್ ಮೇಲೆ ಹಲ್ಲೆ ಆಗಿದೆ. ಈ ಬಗ್ಗೆ ಧ್ರುವ ಪ್ರತಿಕ್ರಿಯೆ ನೀಡಿದ್ದಾರೆ. ‘ವೈಯಕ್ತಿಕ ವಿಚಾರಕ್ಕೆ ಪ್ರಶಾಂತ್ ಮೇಲೆ ಹಲ್ಲೆಯಾಗಿದೆ. ಪ್ರಶಾಂತ್ ನಮ್ ಹುಡುಗ, ಅವನ ಜೊತೆಗಿರುತ್ತೇನೆ. ಪ್ರಶಾಂತ್​ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಸದ್ಯ ಪ್ರಶಾಂತ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದಿದ್ದಾರೆ ಧ್ರುವ

ನಟ ಧ್ರುವ ಸರ್ಜಾ (Dhruva Sarja) ಅವರು ಕಟ್ಟುಮಸ್ತಾದ ದೇಹ ಹೊಂದಿದ್ದಾರೆ. ಅವರು ಯಾವಾಗಲೂ ಜಿಮ್ ಮಾಡೋದನ್ನು ತಪ್ಪಿಸುವುದಿಲ್ಲ. ಇದಕ್ಕೆ ಅವರ ಜಿಮ್ ಟ್ರೇನರ್ ಪ್ರಶಾಂತ್ ಅವರ ಶ್ರಮವೂ ಇದೆ. ಈಗ ಪ್ರಶಾಂತ್ ಮೇಲೆ ಹಲ್ಲೆ ನಡೆದಿದೆ. ಬೆಂಗಳೂರಿನ ಬನಶಂಕರಿಯ ಕೆ.ಆರ್.ರಸ್ತೆಯಲ್ಲಿ ಈ ಹಲ್ಲೆ ಆಗಿದೆ. ಅಪರಿಚಿತರು ಬೈಕ್​ನಲ್ಲಿ ಬಂದು ಪ್ರಶಾಂತ್​ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಬಗ್ಗೆ ಬನಶಂಕರಿ ಪೊಲೀಸರಿಗೆ ಪ್ರಶಾಂತ್ ಮಾಹಿತಿ ನೀಡಿದ್ದಾರೆ. ಈ ಘಟನೆಯ ಬಗ್ಗೆ ನಟ ಧ್ರುವ ಸರ್ಜಾ ಸ್ಪಷ್ಟನೆ ನೀಡಿದ್ದಾರೆ. ‘ವೈಯಕ್ತಿಕ ವಿಚಾರಕ್ಕೆ ಪ್ರಶಾಂತ್ ಮೇಲೆ ಹಲ್ಲೆಯಾಗಿದೆ. ಪ್ರಶಾಂತ್ ನಮ್ ಹುಡುಗ, ಅವನ ಜೊತೆಗಿರುತ್ತೇನೆ. ಪ್ರಶಾಂತ್​ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಸದ್ಯ ಪ್ರಶಾಂತ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More