ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ ಸರ್ಜಾ

Updated on: Jun 10, 2025 | 9:07 PM

ನಟ ಶಿವರಾಜ್​ಕುಮಾರ್ ಅವರು ಸ್ಯಾಂಡಲ್​ವುಡ್​ಗೆ ಕಾಲಿಟ್ಟು 40 ವರ್ಷ ಕಳೆದಿದೆ. ಅದಕ್ಕಾಗಿ ಧ್ರುವ ಸರ್ಜಾ ಶುಭ ಹಾರೈಸಿದ್ದಾರೆ. ವಿಡಿಯೋ ಮೂಲಕ ಧ್ರುವ ಸರ್ಜಾ ಅವರು ಪ್ರೀತಿಯ ಮಾತುಗಳನ್ನು ಹಂಚಿಕೊಂಡಿದ್ದಾರೆ. ಬೇರೆ ಬೇರೆ ಭಾಷೆಯ ಚಿತ್ರರಂಗದ ಕಲಾವಿದರು, ನಿರ್ದೇಶಕರು ಕೂಡ ಶಿವಣ್ಣಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ನಟ ಶಿವರಾಜ್​ಕುಮಾರ್ (Shivarajkumar) ಅವರು ಸ್ಯಾಂಡಲ್​ವುಡ್​ಗೆ ಕಾಲಿಟ್ಟು 40 ವರ್ಷ ಕಳೆದಿದೆ. ಅದಕ್ಕಾಗಿ ಧ್ರುವ ಸರ್ಜಾ ಶುಭ ಹಾರೈಸಿದ್ದಾರೆ. ವಿಡಿಯೋ ಮೂಲಕ ಧ್ರುವ ಸರ್ಜಾ ಅವರು ಪ್ರೀತಿಯ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ಹಾಯ್ ಶಿವಣ್ಣ, ನನ್ನ ವಯಸ್ಸು 35. ನೀವು ಚಿತ್ರರಂಗಕ್ಕೆ ಬಂದು 45 ವರ್ಷ ಆಯ್ತು. ನಿಮಗೆ ವಿಶ್ ಮಾಡುವಷ್ಟು ದೊಡ್ಡವನು ನಾನಲ್ಲ ಅಂತ ಹೇಳಿದೆ. ಆದರೂ ಪೀಡಿಸುತ್ತಿದ್ದಾರೆ. ಒಬ್ಬ ಅಭಿಮಾನಿಯಾಗಿ ನಾನು ನಿಮಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ. ದೇವರು ಹೆಚ್ಚಿನ ಆಯಸ್ಸು, ಆರೋಗ್ಯ ನೀಡಲಿ. ಹೊಸಬರಿಗೆ ನೀವೇ ಸ್ಫೂರ್ತಿ’ ಎಂದು ಧ್ರುವ ಸರ್ಜಾ (Dhruva Sarja) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.