ಸುದೀಪ್ ಮಾತಿನ ಬೆನ್ನಲ್ಲೆ ಉಗ್ರ ರೂಪ ತಾಳಿದ ಧ್ರುವಂತ್-ಸ್ಪಂದನ
Bigg Boss Kannada 12: ಕೆಲ ದಿನಗಳ ಹಿಂದಷ್ಟೆ ವಾರದ ಪಂಚಾಯ್ತಿಯಲ್ಲಿ ಸುದೀಪ್ ಮನೆಯ ಕೆಲ ಸದಸ್ಯರ ಬಗ್ಗೆ ಟೀಕೆ ಮಾಡಿದ್ದರು. ವಿಶೇಷವಾಗಿ ಧ್ರುವಂತ್ ಬಗ್ಗೆ ನೀವು ಒಳ್ಳೆಯವರಾಗಲು ಇಲ್ಲಿ ಬಂದಿಲ್ಲ ಖಡಕ್ ಆಗಿ ಆಟವಾಗಿ, ಖಡಕ್ ಆದ ನಿರ್ಣಯ ತೆಗೆದುಕೊಳ್ಳಿ ಎಂದಿದ್ದರು. ಸುದೀಪ್ ಮಾತಿನ ಬೆನ್ನಲ್ಲೆ ಜೋರು ಜಗಳ ಮಾಡಿದ್ದಾರೆ ಧ್ರುವಂತ್.
ಶನಿವಾರದ ಎಪಿಸೋಡ್ನಲ್ಲಿ ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡಿದ್ದ ಕಿಚ್ಚ ಸುದೀಪ್ (Sudeep) ವಿಶೇಷವಾಗಿ ಧ್ರುವಂತ್ ಬಗ್ಗೆ ಕೆಲ ಮಾತುಗಳನ್ನು ಹೇಳಿದ್ದರು. ನೀವು ಒಳ್ಳೆಯವರಾಗಿ ಇರಲು ಇಲ್ಲಿ ಬಂದಿಲ್ಲ. ನೀವು ಒಳ್ಳೆಯತನ ತೋರಿಸುವ ಆಟ ಇದಲ್ಲ. ನೀವು ಒಳ್ಳೆಯತನ ತೋರಿಸಲೇ ಬೇಕೆಂದಿದ್ದರೆ ಆಟವನ್ನೇ ಬಿಟ್ಟು ಹೋಗಿ ಬೇರೆಯವರು ಗೆದ್ದುಕೊಳ್ಳಲಿ. ಖಡಕ್ ಆಟ ಆಡಿ, ಇಲ್ಲವಾದರೆ ಆಟ ಬಿಟ್ಟು ಹೋಗಿ ಎಂದು ಎಚ್ಚರಿಸಿದ್ದರು. ಸ್ಪಂದನಾ ಕುರಿತಾಗಿ ಸಹ ಇದೇ ರೀತಿಯ ಮಾತುಗಳನ್ನು ಹೇಳಿದ್ದರು. ನೀವು ಮನೆಯಲ್ಲಿ ಇದ್ದೀರೆಂಬುದೇ ಗೊತ್ತಾಗುತ್ತಿಲ್ಲ ಎಂದಿದ್ದರು. ಅದರ ಬೆನ್ನಲ್ಲೆ ಇದೀಗ ಈ ಇಬ್ಬರೂ ಇಡೀ ಮನೆಯೇ ಬೆಚ್ಚಿ ಬೀಳುವಂತೆ ಜಗಳ ಆಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 13, 2025 08:46 AM
Latest Videos

