ನನ್ನ ಮತವನ್ನು ಪೆಟ್ಟಿಗೆಗೆ ಹಾಕುವ ಮೊದಲು ಶಿವಕುಮಾರ್​ಗೆ ತೋರಿಸಿಲ್ಲ: ಹೆಚ್ ಡಿ ರೇವಣ್ಣ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 10, 2022 | 1:05 PM

ವಿಧಾನ ಸೌಧದಲ್ಲಿ ರೇವಣ್ಣನವರನ್ನು ಮಾತಾಡಿಸಿದಾಗ ಅವರು ಅರೋಪವನ್ನು ಸಾರಾ ಸಗಟು ತಳ್ಳಿಹಾಕಿದರು. ಕಾಂಗ್ರೆಸ್ ಪಕ್ಷದವರಿಗೆ ಸೋಲುವುದು ಖಾತ್ರಿಯಾಗಿದೆ, ಹಾಗಾಗಿ ಇಂಥ ಪುಕಾರುಗಳನ್ನು ಹಬ್ಬಿಸುತ್ತಿದ್ದಾರೆ ಅಂತ ಹೇಳಿದರು.

Bengaluru: ರಾಜ್ಯಸಭೆ ಚುನಾವಣೆಗೆ ಮತದಾನ ನಡೆಯುವಾಗ ಪ್ರತಿಬಾರಿ ಜೆಡಿ(ಎಸ್) ನಾಯಕ ಹೆಚ್ ಡಿ ರೇವಣ್ಣ (HD Revanna) ವಿವಾದದ ಸುಳಿಗೆ ಸಿಲುಕಿರುತ್ತಾರೆ. ಈ ಬಾರಿಯೂ ಅವರನ್ನು ಕುರಿತ ವಿವಾದ ಸೃಷ್ಟಿಯಾಗಿದ್ದು ಅವರು ಮತ ಚಲಾಯಿಸಿದ ನಂತರ ಅದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರಿಗೆ ತೋರಿಸಿದ್ದರಿಂದ ಅದು ಅಸಿಂಧು (invalid) ಆಗಿದೆ ಎಂಬ ಮಾತು ಕೇಳಿಬರುತ್ತಿದೆ. ಮಾಧ್ಯಮದವರು ವಿಧಾನ ಸೌಧದಲ್ಲಿ ರೇವಣ್ಣನವರನ್ನು ಮಾತಾಡಿಸಿದಾಗ ಅವರು ಅರೋಪವನ್ನು ಸಾರಾ ಸಗಟು ತಳ್ಳಿಹಾಕಿದರು. ಕಾಂಗ್ರೆಸ್ ಪಕ್ಷದವರಿಗೆ ಸೋಲುವುದು ಖಾತ್ರಿಯಾಗಿದೆ, ಹಾಗಾಗಿ ಇಂಥ ಪುಕಾರುಗಳನ್ನು ಹಬ್ಬಿಸುತ್ತಿದ್ದಾರೆ ಅಂತ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.