ಮುಂದಿನ ದಿನಗಳಲ್ಲಿ ಯೋಗ ಚೆನ್ನಾಗಿದೆ, ಮುಖ್ಯಮಂತ್ರಿಯಾಗಲಿದ್ದೀರಿ ಅಂತ ಸ್ವಾಮೀಜಿಗಳು ಶಿವಕುಮಾರರನ್ನು ಹರಸಿದರು!

ಮುಂದಿನ ದಿನಗಳಲ್ಲಿ ಯೋಗ ಚೆನ್ನಾಗಿದೆ, ಮುಖ್ಯಮಂತ್ರಿಯಾಗಲಿದ್ದೀರಿ ಅಂತ ಸ್ವಾಮೀಜಿಗಳು ಶಿವಕುಮಾರರನ್ನು ಹರಸಿದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 10, 2022 | 11:52 AM

ನೀವು ಮುಖ್ಯಮಂತ್ರಿಯಾಗಲಿದ್ದೀರಿ, ಮುಂಬರುವ ದಿನಗಳಲ್ಲಿ ನಿಮಗೆ ಅತ್ಯುತ್ತಮ ಯೋಗ ಇದೆ ಅಂತ ಹೇಳುತ್ತಾರೆ. ಅದನ್ನ ಎರಡು ಬಾರಿ ಕೇಳಿಸಿಕೊಳ್ಳುವ ಶಿವಕುಮಾರ ಅವರು ಖಷಿಯಿಂದ ಅಲ್ಲಿಂದ ಹೊರಡುತ್ತಾರೆ.

Bengaluru: ರಾಜ್ಯಸಭೆ ಚುನಾವಣೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ವಿಧಾನ ಸೌಧಕ್ಕೆ ಹೊರಡಲು ಮನೆಯಿಂದ ಹೊರಬಿದ್ದಾಗ ಮೂವರಿ ಸ್ವಾಮೀಜಿಗಳು (seers) ಗೇಟಿನ ಹೊರಗಡೆ ಕಾಯುತ್ತಿರುವುದನ್ನು ಕಂಡರು. ಕೂಡಲೇ ಕಾರಿನಿಂದಿದಿಳಿಸ ಅವರು ಎಲ್ಲ ಮೂರು ಸ್ವಾಮೀಜಿಗಳಿಗೆ ದಕ್ಷಿಣೆ ನೀಡಿದರು. ಅದಕ್ಕೆ ಪ್ರತಿಯಾಗಿ ಶಿವಕುಮಾರನ್ನು ಹರಸಿದ ಸ್ವಾಮೀಜಿಗಳು ಮಹಾದೇವ ಸ್ವಾಮಿಯ (Mahadeva Swamy) ಕೃಪೆ ನಿಮ್ಮ ಮೇಲಿದೆ, ನೀವು ಮುಖ್ಯಮಂತ್ರಿಯಾಗಲಿದ್ದೀರಿ, ಮುಂಬರುವ ದಿನಗಳಲ್ಲಿ ನಿಮಗೆ ಅತ್ಯುತ್ತಮ ಯೋಗ ಇದೆ ಅಂತ ಹೇಳುತ್ತಾರೆ. ಅದನ್ನ ಎರಡು ಬಾರಿ ಕೇಳಿಸಿಕೊಳ್ಳುವ ಶಿವಕುಮಾರ ಅವರು ಖಷಿಯಿಂದ ಅಲ್ಲಿಂದ ಹೊರಡುತ್ತಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.