ದಿನಕ್ಕೆ ಕೇವಲ 20 ರೂ. ದುಡಿಯುತ್ತಿದ್ದ ನನ್ನನ್ನು ಕನ್ನಡಿಗರು ಈ ಹಂತಕ್ಕೆ ಬೆಳೆಸಿದ್ದಾರೆ: ಜಗ್ಗೇಶ್
ನನಗೆ ನೀಡುವ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆ ಮತ್ತು ಶ್ರದ್ಧೆಯಿಂದ ನಿರ್ವಹಿಸುತ್ತೇನೆ ಎಂದು ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಧಾನ ಸಭೆ ಪ್ರವೇಶಿಸುವ ಮೊದಲು ಜಗ್ಗೇಶ್ ಹೇಳಿದರು.
ಬೆಂಗಳೂರು:ಶುದ್ಧ ಆತ್ಮನಾಂ ಭವತಿ ಜ್ಞಾನಂ ಎಂದು ಹೇಳುತ್ತಾ ಚಿತ್ರನಟ ಜಗ್ಗೇಶ್ ತಮ್ಮ ಶುಕ್ರವಾರದ ದಿನವನ್ನು ಆರಂಭಿಸಿದ್ದಾರೆ. ಎಲ್ಲರೂ ಶುದ್ಧರಾಗಿರುವ, ಶುದ್ಧತೆಯ ಪರಿಸರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಭಗವಂತನಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕಳೆದ 42 ವರ್ಷಗಳಿಂದ ಕನ್ನಡನಾಡು ನನ್ನನ್ನು ಹಂತಹಂತವಾಗಿ ಬೆಳಸಿದೆ. ಒಂದು ಗ್ರಾಮೀಣ ಭಾಗದಿಂದ ಬಂದು ದಿನವೊಂದಕ್ಕೆ ಕೇವಲ 20 ರೂ. ಕೂಲಿ ಪಡೆಯುತ್ತಿದ್ದ ನನ್ನನ್ನು ಕನ್ನಡಿಗರು ಚಿತ್ರನಟನಾಗಿ ಮತ್ತು ರಾಜಕಾರಣಿಯಾಗಿ ಬೆಳೆಸಿದ್ದಾರೆ. ನನಗೆ ನೀಡುವ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆ ಮತ್ತು ಶ್ರದ್ಧೆಯಿಂದ ನಿರ್ವಹಿಸುತ್ತೇನೆ ಎಂದು ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಧಾನ ಸಭೆ ಪ್ರವೇಶಿಸುವ ಮೊದಲು ಜಗ್ಗೇಶ್ ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos