ಹಣ ಕೊಟ್ಟು ಮಗುವನ್ನು ಖರೀದಿಸಿದ್ದರೆ ಸೋನು? ಮಗುವಿನ ಚಿಕ್ಕಪ್ಪ ಹೇಳಿದ್ದು ಹೀಗೆ
Sonu Gowda: ಹೆಣ್ಣು ಮಗುವೊಂದನ್ನು ಅಕ್ರಮವಾಗಿ ದತ್ತು ಪಡೆದ ಆರೋಪದಲ್ಲಿ ಸೋನು ಗೌಡ ಅವರನ್ನು ಬಂಧಿಸಲಾಗಿದೆ. ಮಗುವಿನ ಪೋಷಕರಿಗೆ ಸೋನು, ಹಣ ನೀಡಿದ್ದರೇ ಎಂಬ ಬಗ್ಗೆ ಅವರ ಚಿಕ್ಕಪ್ಪ ಮಾತನಾಡಿದ್ದಾರೆ.
ಮಾಜಿ ಬಿಗ್ಬಾಸ್ ಸ್ಪರ್ಧಿ, ರೀಲ್ಸ್ಗಳಿಂದ ಜನಪ್ರಿಯತೆ ಗಳಿಸಿರುವ ಸೋನು ಗೌಡ (Sonu Gowda) ಈಗ ಪೊಲೀಸರ ಅತಿಥಿಯಾಗಿದ್ದಾರೆ. ಹೆಣ್ಣು ಮಗುವೊಂದನ್ನು ಅಕ್ರಮವಾಗಿ ದತ್ತು ಪಡೆದಿರುವ ಆರೋಪದಲ್ಲಿ ಬ್ಯಾಡರಹಳ್ಳಿ ಪೊಲೀಸರು ಸೋನು ಗೌಡ ಅನ್ನು ಬಂಧಿಸಿದ್ದಾರೆ. ರಾಯಚೂರಿನ ಮಸ್ಕಿ ತಾಲ್ಲೂಕಿನ ಕಾಚಾಪುರ ಗ್ರಾಮಕ್ಕೆ ಸೋನು ಗೌಡ ಅನ್ನು ಕರೆದೊಯ್ದು ಪಂಚನಾಮೆ ಸಹ ಮಾಡಿದ್ದಾರೆ. ಸೋನು ಗೌಡ, ಪುಟ್ಟ ಬಾಲಕಿಯನ್ನು ಅವರ ಪೋಷಕರಿಗೆ ಹಣ ಕೊಟ್ಟು ಖರೀದಿ ಮಾಡಿದ್ದಾರೆ ಎಂಬ ಆರೋಪ ಸೋನು ಮೇಲಿದೆ. ಈ ಬಗ್ಗೆ ಬಾಲಕಿಯ ಚಿಕ್ಕಪ್ಪ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ಸೋನು ಗೌಡ ಹಣದ ವಿಷಯ ನಮ್ಮೊಟ್ಟಿಗೆ ಮಾತನಾಡಿಲ್ಲ, ನಮ್ಮ ಮಗುವನ್ನು ನಾವು ಯಾರಿಗೂ ಮಾರಿಲ್ಲ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 24, 2024 05:25 PM