ಸೋನು ಗೌಡ ಅಕ್ರಮ ದತ್ತು ಪ್ರಕರಣ: ಪೊಲೀಸರಿಂದ ಸ್ಥಳ ಮಹಜರು

Sonu Gowda: ರೀಲ್ಸ್ ರಾಣಿ ಎಂದೇ ಖ್ಯಾತವಾಗಿರುವ ಸೋನು ಗೌಡ ಅವರನ್ನು ಅಕ್ರಮವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ಬಂಧಿಸಲಾಗಿದೆ. ಇಂದು ಸೋನುರನ್ನು ರಾಯಚೂರಿಗೆ ಕರೆದೊಯ್ದು ಅಲ್ಲಿ ಸ್ಥಳ ಮಹಜರು ಮಾಡಲಾಗಿದೆ.

ಸೋನು ಗೌಡ ಅಕ್ರಮ ದತ್ತು ಪ್ರಕರಣ: ಪೊಲೀಸರಿಂದ ಸ್ಥಳ ಮಹಜರು
Follow us
ಮಂಜುನಾಥ ಸಿ.
|

Updated on: Mar 24, 2024 | 12:15 PM

ಅಪ್ರಾಪ್ತ ಬಾಲಕಿಯನ್ನು ಆಕ್ರಮವಾಗಿ ದತ್ತು ಪಡೆದ ಆರೋಪದಲ್ಲಿ ಸೋಷಿಯಲ್ ಮೀಡಿಯಾ (Social Media) ತಾರೆ ಸೋನು ಗೌಡ ಬಂಧನಕ್ಕೆ ಒಳಗಾಗಿದ್ದು, ಇಂದು (ಮಾರ್ಚ್ 24) ಅವರನ್ನು ರಾಯಚೂರಿಗೆ ಕರೆದೊಯ್ದು ಸ್ಥಳ ಮಹಜರು ಮಾಡಲಾಗಿದೆ. ರಾಯಚೂರಿನ ಬಾಲಕಿಯೊಬ್ಬರನ್ನು ದತ್ತು ಪಡೆದುಕೊಂಡಿರುವುದಾಗಿ ಸೋನು ಗೌಡ (Sonu Gowda) ವಿಡಿಯೋ ಹರಿಬಿಟ್ಟಿದ್ದರು. ಆದರೆ ಸೋನು ಗೌಡ ನಿಯಮ ಬಾಹಿರವಾಗಿ ಮಗುವನ್ನು ದತ್ತು ಪಡೆದಿದ್ದಾರೆಂದು ಆರೋಪಿಸಿ ಜಿಲ್ಲಾ ಮಕ್ಕಳು ಹಕ್ಕು ರಕ್ಷಣಾ ಘಟಕದ ಅಧಿಕಾರಿ ದೂರು ನೀಡಿದ್ದರು. ದೂರಿನ ಅನ್ವಯ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಸೋನು ಗೌಡರನ್ನು ಬಂಧಿಸಿದ್ದರು.

ಇಂದು (ಮಾರ್ಚ್ 24) ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಸೋನು ಗೌಡ ಅವರನ್ನು ಮಗುವಿನ ಊರಾದ ರಾಯಚೂರಿನ ಮಸ್ಕಿ ತಾಲ್ಲೂಕಿನ ಕಾಚಾಪುರ ಗ್ರಾಮಕ್ಕೆ ಕರೆತಂದು ಸ್ಥಳ ಮಹಜರು ಮಾಡಿದರು. ಮಗು ಪಡೆದುಕೊಂಡು ಹೋದ ಸ್ಥಳ,ಗ್ರಾಮದಲ್ಲಿ ಓಡಾಡಿ ಸ್ಥಳಗಳಲ್ಲಿ ಸ್ಥಳ ಮಹಜರು ಮಾಡಿದರು. ಅಲ್ಲದೆ, ಬಾಲಕಿಯನ್ನ ಗ್ರಾಮದಿಂದ ಕರೆದುಕೊಂಡು ಹೋಗಿದ್ದರ ಬಗ್ಗೆ ವಿಚಾರಣೆಯನ್ನು ಸಹ ಮಾಡಿದರು. ಸೋನುಗೌಡ ಜೊತೆಗೆ ಬ್ಯಾಡರಹಳ್ಳಿ ಠಾಣೆಯ ಇಬ್ಬರು ಸಿಬ್ಬಂದಿ ಬಂದು ಮಹಜರು ಮಾಡಿದ್ದಾರೆ.

ಇದನ್ನೂ ಓದಿ:ಸೋನು ಗೌಡ ಮಗು ದತ್ತು ಪಡೆದ ಪ್ರಕರಣ; ತಂದೆ-ತಾಯಿಗೂ ಇದೆ ಸಂಕಷ್ಟ

ಈ ನಡುವೆ ಅಪ್ರಾಪ್ತ ಬಾಲಕಿಯ ಹೆತ್ತವರನ್ನು ಬೆಂಗಳೂರು ಬ್ಯಾಡರಹಳ್ಳಿ ಪೊಲೀಸರು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಪೊಲೀಸರು ಕರೆದ ಕಾರಣ ನಿನ್ನೆ (ಮಾರ್ಚ್ 23) ಬಾಲಕಿಯ ಪೋಷಕರು ರಾಯಚೂರಿನಿಂದ ಬೆಂಗಳೂರಿಗೆ ಹೊರಟು ತಲುಪಿದ್ದಾರೆ. ಇಂದು ಪೊಲೀಸರ ವಿಚಾರಣೆ ಎದುರಿಸಲಿರುವ ಬಾಲಕಿಯ ಪೋಷಕರಿಂದ ಪ್ರಕರಣದ ಬಗ್ಗೆ ಇನ್ನಷ್ಟು ವಿಷಯಗಳು ಹೊರಗೆ ಬೀಳಲಿವೆ.

ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದ ಸೋನು ಗೌಡ, ಬಾಲಕಿಯೊಬ್ಬಾಕೆಯನ್ನು ದತ್ತು ಪಡೆದುಕೊಂಡಿರುವುದಾಗಿ ಹೇಳಿದ್ದರು. ಆ ಬಾಲಕಿ ತಾನಿಲ್ಲದೆ ಇರುವುದಿಲ್ಲವೆಂದು, ದತ್ತು ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಪೂರ್ಣವಾಗುತ್ತದೆ ಎಂದು ಹೇಳಿದ್ದರು. ಬಾಲಕಿಯಿಂದ ಬಂದ ಹಣವನ್ನು ಪೋಷಕರಿಗೆ ನೀಡುತ್ತೇನೆ ಎಂದು ಸಹ ಸೋನು ಗೌಡ ವಿಡಿಯೋನಲ್ಲಿ ಹೇಳಿದ್ದರು. ಸೋನು ಗೌಡ, ನಿಯಮದ ಅನ್ವಯ ಮಗುವನ್ನು ದತ್ತು ಪಡೆದಿಲ್ಲ ಎಂಬುದು ಅವರ ಮಾತುಗಳಿಂದ ಖಾತ್ರಿಯಾಗುತ್ತಿತ್ತು. ವಿಡಿಯೋ ಆಧಾರದ ಮೇಲೆ ಜಿಲ್ಲಾ ಮಕ್ಕಳು ಹಕ್ಕು ರಕ್ಷಣಾ ಘಟಕದ ಅಧಿಕಾರಿ ಸೋನು ಗೌಡ ವಿರುದ್ಧ ದೂರು ದಾಖಲಿಸಿದ್ದರು, ದೂರು ದಾಖಲಿಸಿಕೊಂಡಿದ್ದ ಪೊಲೀಸರು ಸೋನು ಗೌಡರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾವೇನು ಕೈಗೆ ಬಳೆ ತೊಟ್ಟು ಕುಳಿತಿಲ್ಲ: ವಿಜಯೇಂದ್ರ ಕಿಡಿ
ನಾವೇನು ಕೈಗೆ ಬಳೆ ತೊಟ್ಟು ಕುಳಿತಿಲ್ಲ: ವಿಜಯೇಂದ್ರ ಕಿಡಿ
ಒಬ್ಬ ಭಯೋತ್ಪಾದಕನ ಹಾಗೆ ರವಿಯವರನ್ನು ನಡೆಸಿಕೊಂಡಿದ್ದಾರೆ: ವಿಜಯೇಂದ್ರ
ಒಬ್ಬ ಭಯೋತ್ಪಾದಕನ ಹಾಗೆ ರವಿಯವರನ್ನು ನಡೆಸಿಕೊಂಡಿದ್ದಾರೆ: ವಿಜಯೇಂದ್ರ
ಬಿಡುಗಡೆ ಬಳಿಕ ಸಿಟಿ ರವಿ ಮಹತ್ವದ ಸುದ್ದಿಗೋಷ್ಠಿಯ ನೇರಪ್ರಸಾರ
ಬಿಡುಗಡೆ ಬಳಿಕ ಸಿಟಿ ರವಿ ಮಹತ್ವದ ಸುದ್ದಿಗೋಷ್ಠಿಯ ನೇರಪ್ರಸಾರ
ಮೀರತ್‌ನಲ್ಲಿ ಪ್ರದೀಪ್ ಮಿಶ್ರಾ ಕಥಾ ಕಾರ್ಯಕ್ರಮದಲ್ಲಿ ಕಾಲ್ತುಳಿತ
ಮೀರತ್‌ನಲ್ಲಿ ಪ್ರದೀಪ್ ಮಿಶ್ರಾ ಕಥಾ ಕಾರ್ಯಕ್ರಮದಲ್ಲಿ ಕಾಲ್ತುಳಿತ
ರವಿಯವರ ಚಿಕ್ಕಮಗಳೂರು ಮನೆಬಳಿ ಕಾರ್ಯಕರ್ತರ ಸಂಭ್ರಮಾಚರಣೆ 
ರವಿಯವರ ಚಿಕ್ಕಮಗಳೂರು ಮನೆಬಳಿ ಕಾರ್ಯಕರ್ತರ ಸಂಭ್ರಮಾಚರಣೆ 
ಪಾಯಿಂಟ್ ಬ್ಲ್ಯಾಂಕ್ ರೇಂಜಲ್ಲಿ ಶೂಟ್ ಮಾಡುವಂತೆ ಹೇಳಿದ್ದು ನಿಜ: ಪ್ರಸಾದ್
ಪಾಯಿಂಟ್ ಬ್ಲ್ಯಾಂಕ್ ರೇಂಜಲ್ಲಿ ಶೂಟ್ ಮಾಡುವಂತೆ ಹೇಳಿದ್ದು ನಿಜ: ಪ್ರಸಾದ್
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಟಿ ರವಿ ಪ್ರಕರಣ ವಿಚಾರಣೆ ಆರಂಭ
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಟಿ ರವಿ ಪ್ರಕರಣ ವಿಚಾರಣೆ ಆರಂಭ
ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ
ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ
ರವಿ ಮನೆಯಲ್ಲಿ ಪ್ರಾಣೇಶ್ ಜೊತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು
ರವಿ ಮನೆಯಲ್ಲಿ ಪ್ರಾಣೇಶ್ ಜೊತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು
ಸ್ಪರ್ಧಿಗಳಿಗೆ ಇನ್ನಷ್ಟು ಕಷ್ಟ ಕೊಟ್ಟ ಬಿಗ್ ಬಾಸ್; ಭವ್ಯಾ, ಐಶ್ವರ್ಯಾ ಪರದಾಟ
ಸ್ಪರ್ಧಿಗಳಿಗೆ ಇನ್ನಷ್ಟು ಕಷ್ಟ ಕೊಟ್ಟ ಬಿಗ್ ಬಾಸ್; ಭವ್ಯಾ, ಐಶ್ವರ್ಯಾ ಪರದಾಟ