AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನು ಗೌಡ ಮಗು ದತ್ತು ಪಡೆದ ಪ್ರಕರಣ; ತಂದೆ-ತಾಯಿಗೂ ಇದೆ ಸಂಕಷ್ಟ

ತಾವು ಮಗುವನ್ನು ಹೆತ್ತರೂ ಅದನ್ನು ಬೇರೆಯವರಿಗೆ ವಹಿಸಬೇಕಾದರೆ ಅದಕ್ಕೆ ಕಾನೂನಿನ ನಿಯಮಗಳು ಹಾಗೂ ಪ್ರಕ್ರಿಯೆಗಳನ್ನು ಪಾಲಿಸಿಯೇ ಹೋಗಬೇಕು. ಆದರೆ, ಈ ಪ್ರಕರಣದಲ್ಲಿ ಆ ರೀತಿ ನಿಯಮಗಳು ಪಾಲನೆ ಆಗಿಲ್ಲ. ಹೀಗಾಗಿ, ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ ಅಧಿಕಾರಿಗಳು ವಿಚಾರಣೆ ವೇಳೆ ಮಗುವನ್ನು ಕೊಟ್ಟಿದ್ದಕ್ಕೆ ಅಧಿಕಾರಿಗಳು ಕಾರಣ ಕೇಳಲಿದ್ದಾರೆ.

ಸೋನು ಗೌಡ ಮಗು ದತ್ತು ಪಡೆದ ಪ್ರಕರಣ; ತಂದೆ-ತಾಯಿಗೂ ಇದೆ ಸಂಕಷ್ಟ
ಸೋನು
ರಾಜೇಶ್ ದುಗ್ಗುಮನೆ
|

Updated on: Mar 23, 2024 | 9:19 AM

Share

ಸೋನು ಶ್ರೀನಿವಾಸ ಗೌಡ (Sonu Srinivas Gowda) ಅವರು ಕಾನೂಬಾಹಿರವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಸಂಕಷ್ಟ ಅನುಭವಿಸಿದ್ದಾರೆ. ಅವರನ್ನು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಈಗ ಈ ಪ್ರಕರಣದಲ್ಲಿ ಬಾಲಕಿಯ ತಂದೆ ತಾಯಿಗೂ ಸಂಕಷ್ಟ ಉಂಟಾಗುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ ತಂದೆ ತಾಯಿಗೆ ನೋಟಿಸ್ ನೀಡಲಾಗಿದೆ.

ತಾವು ಮಗುವನ್ನು ಹೆತ್ತರೂ ಅದನ್ನು ಬೇರೆಯವರಿಗೆ ವಹಿಸಬೇಕಾದರೆ ಅದಕ್ಕೆ ಕಾನೂನಿನ ನಿಯಮಗಳು ಹಾಗೂ ಪ್ರಕ್ರಿಯೆಗಳನ್ನು ಪಾಲಿಸಿಯೇ ಹೋಗಬೇಕು. ಆದರೆ, ಈ ಪ್ರಕರಣದಲ್ಲಿ ಆ ರೀತಿ ನಿಯಮಗಳು ಪಾಲನೆ ಆಗಿಲ್ಲ. ಹೀಗಾಗಿ, ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ ಅಧಿಕಾರಿಗಳು ವಿಚಾರಣೆ ವೇಳೆ ಮಗುವನ್ನು ಕೊಟ್ಟಿದ್ದಕ್ಕೆ ಅಧಿಕಾರಿಗಳು ಕಾರಣ ಕೇಳಲಿದ್ದಾರೆ. ಹಣ ಪಡೆದು ಮಗುವನ್ನು ನೀಡಿದ್ದೇವೆ ಎಂದರೆ ಪೋಷಕರಿಗೆ ಕಂಟಕ ಫಿಕ್ಸ್ ಎನ್ನಲಾಗಿದೆ.

ಮಗುವನ್ನು ಹಣಕ್ಕೆ ಮಾರಾಟ ಮಾಡಿದ್ರೆ ಪೋಷಕರ ವಿರುದ್ಧವೂ ಪ್ರಕರಣ ದಾಖಲಾಗುತ್ತದೆ. ಬಡತನದ ಕಾರಣದಿಂದ ಮಗುವನ್ನ ನೋಡಿಕೊಳ್ಳಲು ಕೊಟ್ಟಿದ್ದು ಎಂದರೆ ಸಮಸ್ಯೆ ಉಂಟಾಗೋ ಸಾಧ್ಯತೆ ಕಡಿಮೆ. ಮಗುವಿನ ಪಾಲಕರ ಹೇಳಿಕೆ ಮೇಲೆ ಮುಂದಿನ ಕ್ರಮ ನಿರ್ಧರ ಆಗಲಿದೆ.

ಇದನ್ನೂ ಓದಿ: ‘ಮಗು ಅಂದ್ರೆ ದುಡ್ಡು ಮಾಡೋ ವಸ್ತು ಅಲ್ಲ’; ಸೋನು ಶ್ರೀನಿವಾಸ ಗೌಡಗೆ ತರಾಟೆ

‘ಬಡತನ ಕಾರಣಕ್ಕೆ ಮಗುವನ್ನು ಸೋನು ಗೌಡಗೆ ನೀಡಲಾಗಿತ್ತು’ ಎಂದರೆ ಪೋಷಕರು ಹಾಗೂ ಮಗುವಿಗೆ ಕೌನ್ಸಿಲಿಂಗ್ ಅಧಿಕಾರಿಗಳು ಮಾಡಲಿದ್ದಾರೆ. ಕೌನ್ಸಿಲಿಂಗ್ ಸಮಯದಲ್ಲಿ ಮಗುವನ್ನ ನೋಡಿಕೊಳ್ಳಲು ಆಗುವುದಿಲ್ಲ ಎಂದರೆ ಮಗುವಿನ ಭವಿಷ್ಯಕ್ಕೆ ಸರ್ಕಾರದಿಂದ ಅರ್ಥಿಕ ಸಹಾಯ ಮಾಡುವ ಬಗ್ಗೆಯೂ ಪ್ರಸ್ತಾಪ ಮಾಡಲಾಗುತ್ತದೆ. ಇದಕ್ಕೂ ತಂದೆ ತಾಯಿಗಳು ಒಪ್ಪದೆ ಇದ್ದರೆ ಸರ್ಕಾರ ಮಗುವನ್ನು ಪಡೆದುಕೊಳ್ಳುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ