ಬಾಲಕಿ ದತ್ತು ಪ್ರಕರಣ; ಸೋನು ಶ್ರೀನಿವಾಸ್ ಗೌಡ ಬಗ್ಗೆ ಗ್ರಾಮಸ್ಥರು ಹೇಳಿದ್ದೇನು?
ಪೊಲೀಸ್ ಕಸ್ಟಡಿಯಲ್ಲಿ ಇರುವ ಸೋನು ಶ್ರೀನಿವಾಸ್ ಗೌಡ ಅವರನ್ನು ರಾಯಚೂರಿಗೆ ಕರೆದುಕೊಂಡ ಹೋಗಿ ಸ್ಥಳ ಮಹಜರು ಮಾಡಲಾಗಿದೆ. ಈ ವೇಳೆ ಗ್ರಾಮಸ್ಥರು ಪ್ರತಿಕ್ರಿಯೆ ನೀಡಿದ್ದಾರೆ. ‘ಪ್ರೀತಿ-ವಿಶ್ವಾಸಕ್ಕೆ ಈ ರೀತಿ ಆಗಿದೆ. ದತ್ತು ತೆಗೆದುಕೊಂಡಿಲ್ಲ. ಹೆಣ್ಣು ಮಗಳನ್ನು ಶಾಲೆ ಓದಿಸುತ್ತೇನೆ ಎಂದು ಕರೆದುಕೊಂಡು ಹೋಗಿದ್ದಾರೆ’ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಬಾಲಕಿಯನ್ನು ಕಾನೂನುಬಾಹಿರವಾಗಿ ದತ್ತು ಪಡೆದುಕೊಂಡ ಆರೋಪವನ್ನು ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಎದುರಿಸುತ್ತಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿ ಇರುವ ಸೋನು ಗೌಡ ಅವರನ್ನು ರಾಯಚೂರಿಗೆ ಕರೆದುಕೊಂಡ ಹೋಗಿ ಮಹಜರು ಮಾಡಲಾಗಿದೆ. ಆ ಬಳಿಕ ಗ್ರಾಮಸ್ಥರು ಪ್ರತಿಕ್ರಿಯೆ ನೀಡಿದ್ದಾರೆ. ‘ಅಕ್ರಮವಾಗಿ ಅನ್ನೋಕೆ ಆಗಲ್ಲ. ದತ್ತು ತಗೊಂಡಿಲ್ಲ. ಪ್ರೀತಿ ವಿಶ್ವಾಸಕ್ಕೆ ಈ ರೀತಿ ಆಗಿದೆ. ಹೆಣ್ಣು ಮಗಳನ್ನು ಶಾಲೆ ಓದಿಸುತ್ತೇನೆ ಎಂದು ಕರೆದುಕೊಂಡು ಹೋಗಿದ್ದಾರೆ. ಮತ್ತೆ ಬೇರೆ ಏನೂ ಇಲ್ಲ. ಆಮಿಷಕ್ಕೆ ಒಳಗಾಗಿಲ್ಲ. ನಮ್ಮ ರೈತರ ಜೀವನದಲ್ಲಿ ಮುಂದೆ ಎಂದಿಗೂ ಈ ರೀತಿ ಆಗಬಾರದು. ತಂದೆ-ತಾಯಿಯ ಬೆಂಬಲವಾಗಿ ನಾವು ಇದ್ದೇವೆ’ ಎಂದು ಗ್ರಾಮಸ್ಥರು ಹೇಳಿದ್ದಾರೆ. ಶುಕ್ರವಾರ (ಮಾರ್ಚ್ 22) ಮಾಧ್ಯಮಗಳ ಎದುರು ಸೋನು ಗೌಡ (Sonu Gowda) ಅವರು ಮೊದಲ ಪ್ರತಿಕ್ರಿಯೆ ನೀಡಿದ್ದರು. ‘ತೊಂದರೆ ಏನೂ ಇಲ್ಲ. ಕಾನೂನಿನ ಪ್ರಕಾರ ತನಿಖೆ ನಡೆಯುತ್ತಿದೆ. ಹುಡುಗಿಯನ್ನು ರಕ್ಷಣೆ ಮಾಡೋಕೆ ಅಂತ ನಾನು ಕರೆದುಕೊಂಡ ಬಂದಿದ್ದು. ಅವಳು ಈಗಲೂ ಆರಾಮಾಗಿ, ಸುರಕ್ಷಿತವಾಗಿ ಇದ್ದಾಳೆ’ ಎಂದು ಸೋನು ಗೌಡ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.