Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೊಡಿಸಲು ಶೋಭಾರನ್ನು ಯಡಿಯೂರಪ್ಪ ಜೊತೆಗೆ ಕರೆದೊಯ್ದಿದ್ದರೆ? ಕೆಎಸ್ ಈಶ್ವರಪ್ಪ

ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೊಡಿಸಲು ಶೋಭಾರನ್ನು ಯಡಿಯೂರಪ್ಪ ಜೊತೆಗೆ ಕರೆದೊಯ್ದಿದ್ದರೆ? ಕೆಎಸ್ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 23, 2024 | 3:59 PM

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತನಗೆ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವಂತೆ ಸೂಚಿಸಿದಾಗಿನಿಂದ ಹಿಡಿದು ಮೊನ್ನೆಯವರೆಗೆ ಕಾಂತೇಶ್ ಗೆ ಟಿಕೆಟ್ ಕೊಡಿಸುತ್ತೇನೆಂದು ಹೇಳಿದ್ದ ಯಡಿಯೂರಪ್ಪ ತಮ್ಮ ಆಪ್ತರಾದ ಬೊಮ್ಮಾಯಿ ಮತ್ತು ಶೋಭಾ ಕರಂದ್ಲಾಜೆಗೆ ಟಿಕೆಟ್ ಕೊಡಿಸಿದರು ಎಂದು ಈಶ್ವರಪ್ಪ ಹೇಳಿದರು.

ಶಿವಮೊಗ್ಗ: ಬಿಎಸ್ ಯಡಿಯೂರಪ್ಪ (BS Yediyurappa) ವಿರುದ್ಧ ಕೆಎಸ್ ಈಶ್ವರಪ್ಪ (KS Eshwarappa) ಕೋಪ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಇಂದು ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಪ್ರಚಾರ ಶುರುಮಾಡಿದ ಈಶ್ವರಪ್ಪ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಯಡಿಯೂರಪ್ಪ ತನಗೆ ಮೋಸ ಮಾಡಿದರೆಂದು ಮತ್ತೊಮ್ಮೆ ಹೇಳಿದರು. ಅವರ ಮನೆಗೆ ತಾನು ಮಗನೊಂದಿಗೆ ಹೋಗಿದ್ದಾಗ ಯಡಿಯೂರಪ್ಪ, ಕಾಂತೇಶ್ ಗೆ (Kanthesh) ಟಿಕೆಟ್ ಕೊಡಿಸುವುದಲ್ಲದೆ ಅವನ ಪರ ಓಡಾಡಿ ಗೆಲ್ಲಿಸುವ ಭರವಸೆ ನೀಡಿದ್ದರು. ಬಸವರಾಜ ಬೊಮ್ಮಾಯಿ ಒಬ್ಬ ವಿಫಲ ಮುಖ್ಯಮಂತ್ರಿ ಎಂದು ಪಕ್ಷದ ವರಿಷ್ಠರಿಗೆ ಗೊತ್ತಿದೆ ಹಾಗಾಗಿ ಅವರು ಬೊಮ್ಮಾಯಿಗೆ ಟಿಕೆಟ್ ಕೊಡುವುದೇ ಸಾಧ್ಯವೇ ಅಂತ ಯಡಿಯೂರಪ್ಪ ಹೇಳಿದ್ದರು. ಆದರೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಣೆಯಾದಾಗ ಕಾಂತೇಶ್ ಹೆಸರಿರಲಿಲ್ಲ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತನಗೆ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವಂತೆ ಸೂಚಿಸಿದಾಗಿನಿಂದ ಹಿಡಿದು ಮೊನ್ನೆಯವರೆಗೆ ಕಾಂತೇಶ್ ಗೆ ಟಿಕೆಟ್ ಕೊಡಿಸುತ್ತೇನೆಂದು ಹೇಳಿದ್ದ ಯಡಿಯೂರಪ್ಪ ತಮ್ಮ ಆಪ್ತರಾದ ಬೊಮ್ಮಾಯಿ ಮತ್ತು ಶೋಭಾ ಕರಂದ್ಲಾಜೆಗೆ ಟಿಕೆಟ್ ಕೊಡಿಸಿದರು. ಆಮೇಲೆ ತನಗೆ ಫೋನ್ ಮಾಡಿ, ಚಿಂತಿಸುವ ಅವಶ್ಯಕತೆಯಿಲ್ಲ, ಇಬ್ಬರೂ ದೆಹಲಿಗೆ ಹೋಗಿ ಟಿಕೆಟ್ ಕೇಳೋಣ ಅಂದರು. ಆಗ ತಾನು ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೊಡಿಸಲು ಶೋಭಾರನ್ನು ಜೊತೆಗೆ ಕರೆದುಕೊಂಡು ಹೋಗಿದ್ರಾ ಅಂತ ಪ್ರಶ್ನಿಸಿದೆ ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ‘ಮತ್ತೊಮ್ಮೆ ಮೋದಿ 2024’ ಗೋಡೆ ಬರಹ ಅಭಿಯಾನಕ್ಕೆ ಬಿಎಸ್ ಯಡಿಯೂರಪ್ಪ ಚಾಲನೆ