Video: ಜೈಲಿನ 25 ಅಡಿ ಎತ್ತರದ ಗೋಡೆ ಹಾರಿ ಪರಾರಿಯಾಗಿದ್ದ ಅಪರಾಧಿ ಸಿಕ್ಕಿದ್ದೆಲ್ಲಿ ನೋಡಿ

Updated on: Jul 25, 2025 | 2:32 PM

ಜೈಲಿನ 25 ಅಡಿ ಎತ್ತರದ ಗೋಡೆ ಹಾರಿ ಪರಾರಿಯಾಗಿದ್ದ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಘಟನೆಯ ವಿಡಿಯೋ ಕೂಡ ಸಿಕ್ಕಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ. ಕಣ್ಣೂರಿನ ಜೈಲಿನಿಂದ ಅಪರಾಧಿ ಪರಾರಿಯಾಗಿದ್ದ. ಬಳಿಕ ಆತ ಬಾವಿಯೊಂದರಲ್ಲಿ ಅಡಗಿಕುಳಿತಿದ್ದ. ಇಂದು ಮುಂಜಾನೆ ಕಣ್ಣೂರು ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಕುಖ್ಯಾತ ವ್ಯಕ್ತಿಯನ್ನು 10 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮತ್ತೆ ಸೆರೆಹಿಡಿಯಲಾಯಿತು. ಅತ್ಯಾಚಾರ ಮತ್ತು ಕೊಲೆ ಅಪರಾಧಿ ಜೈಲಿನ ಬಟ್ಟೆಯಲ್ಲಿ ಇರಲಿಲ್ಲ. ಆತನಿಗೆ ಒಂದು ಕೈ ಕೂಡ ಇಲ್ಲ.

ತಿರುವನಂತಪುರಂ, ಜುಲೈ 25: ಜೈಲಿನ 25 ಅಡಿ ಎತ್ತರದ ಗೋಡೆ ಹಾರಿ ಪರಾರಿಯಾಗಿದ್ದ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಘಟನೆಯ ವಿಡಿಯೋ ಕೂಡ ಸಿಕ್ಕಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ. ಕಣ್ಣೂರಿನ ಜೈಲಿನಿಂದ ಅಪರಾಧಿ ಪರಾರಿಯಾಗಿದ್ದ. ಬಳಿಕ ಆತ ಬಾವಿಯೊಂದರಲ್ಲಿ ಅಡಗಿಕುಳಿತಿದ್ದ. ಇಂದು ಮುಂಜಾನೆ ಕಣ್ಣೂರು ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಕುಖ್ಯಾತ ವ್ಯಕ್ತಿಯನ್ನು 10 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮತ್ತೆ ಸೆರೆಹಿಡಿಯಲಾಯಿತು. ಅತ್ಯಾಚಾರ ಮತ್ತು ಕೊಲೆ ಅಪರಾಧಿ ಜೈಲಿನ ಬಟ್ಟೆಯಲ್ಲಿ ಇರಲಿಲ್ಲ. ಆತನಿಗೆ ಒಂದು ಕೈ ಕೂಡ ಇಲ್ಲ.

ಆತ 2011ರಲ್ಲಿ ಯುವತಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಅಪರಾಧಿ ಗೋವಿಂದಚಾಮಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಕಣ್ಣೂರಿನ ಪಾಳು ಬಿದ್ದ ಕಟ್ಟಡದ ಸಮೀಪದಲ್ಲಿರುವ ಬಾವಿಯಲ್ಲಿ ಆತ ಪತ್ತೆಯಾಗಿದ್ದಾನೆ. ಪೊಲೀಸರು ಆತನನ್ನು ಹಿಡಿಯಲು ಪ್ರಯತ್ನಿಸುತ್ತಿರುವಾಗ ಆತ ಓಡಿ ಹೋಗಲು ಯತ್ನಿಸಿದ್ದ, ಬಳಿಕ ಹೇಗೋ ಆತನನ್ನು ಹಿಡಿಯಲಾಯಿತು.

ಸ್ಥಳೀಯರು ಗೋವಿಂದಚಾಮಿಗೆ ಹೋಲುವ ವ್ಯಕ್ತಿಯೊಬ್ಬನನ್ನು ನೋಡಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದರು. ಬಳಿಕ ಪೊಲೀಸರು ಅಲ್ಲಿಗೆ ಧಾವಿಸಿ ಆತನನ್ನು ಹಿಡಿದಿದ್ದಾರೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ತಪ್ಪಿಸಿಕೊಂಡಿದ್ದ. ಆತ ಎರ್ನಾಕುಲಂ ಪ್ಯಾಸೆಂಜರ್ ರೈಲಿನಲ್ಲಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ