ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ್ದನ್ನು ಒಳ್ಳೇ ಮಹೂರ್ತದಲ್ಲಿ ಹೇಳೋಣ ಅಂದ್ಕೊಡಿದ್ದೆ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ
ರಮೇಶ್ ಅರವಿಂದ್, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಡಾಲಿ ಧನಂಜಯ ಅವರು ಪ್ರಮುಖ ತಾರಾಗಣದಲ್ಲಿರುವ ಎರಡು ಸಿನಿಮಾಗಳನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಐರಾ ಸಂಸ್ಥೆ ನಿರ್ಮಿಸುತ್ತಿದೆ, ದಕ್ಷಿಣ ಮತ್ತು ಉತ್ತರ ಕರ್ನಾಟಕ ಎಂಬ ತಾರತಮ್ಯ ಮಾಡದೆ ಉತ್ತಮ ಕಲಾವಿದರಿಗೆ ಅವಕಾಶ ನೀಡುವ ಸಂಕಲ್ಪ ಮಾಡಿಕೊಂಡಿದ್ದೇವೆ, ಎರಡೂ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ ಎಂದು ಸಚಿವೆ ಹೇಳಿದರು.
ಬೆಳಗಾವಿ, ಜುಲೈ 25: ಮಹಿಳಾ ಮತ್ತು ಮಹಿಳಾ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇವತ್ತು ಜಾಲಿ ಮೂಡ್ನಲಿದ್ದರು ಮತ್ತು ಮಾಧ್ಯಮದವರ ಜೊತೆ ಸಂತಸದಿಂದ, ನಗುತ್ತಾ ತಮ್ಮ ಸಿನಿಮಾ ಪ್ರೊಡಕ್ಷನ್ ಹೌಸ್ (film production house) ವಿಷಯದಲ್ಲಿ ಮಾತಾಡಿದರು. ಐರಾ ಚಿತ್ರ ನಿರ್ಮಾಣ ಸಂಸ್ಥೆಯನ್ನು ಒಂದೂವರೆ ವರ್ಷದ ಹಿಂದೆ ಆರಂಭಿಸಿದ್ದರೂ ಅದನ್ನು ಅವರು ಗೌಪ್ಯವಾಗಿಟ್ಟಿದ್ದರು. ಸಂಸ್ಥೆಯ ಬಗ್ಗೆ ಸುಳಿವು ಪಡೆದ ಮಾಧ್ಯಮದವರು ಅದರ ಬಗ್ಗೆ ಪ್ರಶ್ನೆ ಕೇಳಿದಾಗ, ಒಂದು ಒಳ್ಳೇ ಮುಹೂರ್ತ ಮತ್ತು ಸಂದರ್ಭ ನೋಡಿ ಸಂಸ್ಥೆಯನ್ನು ಆರಂಭಿಸಿರುವ ಬಗ್ಗೆ ಮತ್ತು ಎರಡು ಸಿನಿಮಾಗಳನ್ನು ನಿರ್ಮಿಸುತ್ತಿರುವ ಬಗ್ಗೆ ಘೋಷಣೆ ಮಾಡೋಣ ಅಂದುಕೊಂಡಿದ್ದೆ, ಐರಾ ಸಂಸ್ಥೆಯಲ್ಲಿ ಒಬ್ಬ ಪಾಲುದಾರರೂ ನಮ್ಮೊಂದಿಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಸಿಎಂ ಬದಲಾವಣೆ ಆಗುವುದಾದರೆ ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ