ಚಿತ್ರದುರ್ಗದಲ್ಲಿ ಅತ್ತೆ-ಸೊಸೆಯರ‌ ಡಿಕ್ಕಿ ಹಬ್ಬ: ಹೇಗೆ ಡಿಚ್ಚಿ ಹೊಡಿತಾರೆ ವಿಡಿಯೋ ನೋಡಿ

| Updated By: ವಿವೇಕ ಬಿರಾದಾರ

Updated on: Mar 07, 2024 | 9:22 AM

ಚಿತ್ರದುರ್ಗದಲ್ಲಿ ವಿಚಿತ್ರ ಆಚರಣೆಯೊಂದು ಗಮನ ಸೆಳೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಅತ್ತೆ-ಸೊಸೆಯರ ಡಿಕ್ಕಿ ಹಬ್ಬ ಆಚರಿಸಲಾಯಿತು. ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿಯ ಸಾಂಪ್ರದಾಯಿಕ ಆಚರಣೆ ಇದಾಗಿದೆ.

ಚಿತ್ರದುರ್ಗ, ಮಾರ್ಚ್​ 07: ಚಿತ್ರದುರ್ಗದಲ್ಲಿ ವಿಚಿತ್ರ ಆಚರಣೆಯೊಂದು ಗಮನ ಸೆಳೆದಿದೆ. ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ (Challakere) ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಅತ್ತೆ-ಸೊಸೆಯರ ಡಿಕ್ಕಿ ಹಬ್ಬ ಆಚರಿಸಲಾಯಿತು. ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿಯ ಸಾಂಪ್ರದಾಯಿಕ ಆಚರಣೆ ಇದಾಗಿದೆ. 12 ಪೆಟ್ಟಿಗೆ ದೇವರ ಗುಗ್ಗರಿ ಹಬ್ಬದ ಅಂಗವಾಗಿ ಡಿಕ್ಕಿ ಹಬ್ಬ ಆಚರಿಸಲಾಗುತ್ತದೆ. ಗುಗ್ಗರಿ ಹಬ್ಬ ಮಾರ್ಚ್ 2 ರಿಂದ ಮಾರ್ಚ್ 7ರ ವರೆಗೆ ಒಂದು ವಾರ ನಡೆಯುತ್ತದೆ. ಮ್ಯಾಸಬೇಡರ ಆರಾಧ್ಯ ದೈವ ಗಾದ್ರಿಪಾಲನಾಯಕ (ಮುತ್ತಯ್ಯ ದೇವರು) ಹುಲಿ ಜೊತೆ ಸೆಣೆಸಾಡಿದ್ದರಂತೆ. ಮ್ಯಾಸಬೇಡರ ಸಾಂಸ್ಕೃತಿಕ ನಾಯಕ ಗಾದ್ರಿಪಾಲನಾಯಕ ಹುಲಿ ಜತೆ ಸೆಣೆಸಾಟದ ಸ್ಮರಣಾರ್ಥ ಡಿಕ್ಕಿ ಹಬ್ಬ ಆಚರಿಸಲಾಗುತ್ತದೆ. ಬಂಗಾರ ದೇವರು ಗಾದ್ರಿ ಪಾಲನಾಯಕನಿಗೆ ತೆಂಗಿನಕಾಯಿ ಒಡೆಯುವುದಿಲ್ಲ. ಹೀಗಾಗಿ ತೆಂಗಿನಕಾಯಿ ರೀತಿ ತಲೆ ಇರುವುದರಿಂದ ಅತ್ತೆ-ಸೊಸೆಯಂದಿರು ಪರಸ್ಪರ ಡಿಚ್ಚಿ ಹೊಡೆದುಕೊಳ್ಳುತ್ತಾರೆ. ಡಿಕ್ಕಿ ಹಬ್ಬಕ್ಕೆ ಮುತ್ತಯ್ಯ ದೇವರು ಗುಡಿ ಬಳಿ ನಿನ್ನೆ (ಮಾ.06)ರ ಸಂಜೆ ಸಾಂಕೇತಿಕವಾಗಿ ಆಚರಿಸಲಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್​ ಮಾಡಿ

Published on: Mar 07, 2024 09:16 AM