Maha Shivaratri: ಶಿವನಿಗೆ ಅಭಿಷೇಕ ಮಾಡಲು ಯಾವ ಯಾವ ವಸ್ತುಗಳನ್ನು ಬಳಸಬೇಕು? ಈ ವಿಡಿಯೋ ನೋಡಿ

Maha Shivaratri: ಶಿವನಿಗೆ ಅಭಿಷೇಕ ಮಾಡಲು ಯಾವ ಯಾವ ವಸ್ತುಗಳನ್ನು ಬಳಸಬೇಕು? ಈ ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on:Mar 07, 2024 | 7:02 AM

ಶಿವ ಅಭಿಷೇಕ ಪ್ರಿಯ. ಹೀಗಾಗಿ ಮಹಾ ಶಿವರಾತ್ರಿ ದಿನದಂದು ಆತನಿಗೆ ವಿಶೇಷವಾಗಿ ಅಭಿಷೇಕ ಮಾಡುವ ಮೂಲಕ ಸಂತೃಪ್ತಿಪಡಿಸಲಾಗುತ್ತದೆ. ಅರ್ಧನಾರೇಶ್ವರನಿಗೆ ಕೆಲವು ವಿಶೇಷ ವಸ್ತುಗಳಿಂದ ಅಭಿಷೇಕ ಮಾಡಿದರೆ ಏನು ಶುಭವಾಗುತ್ತದೆ? ಮುಖ್ಯವಾಗಿ ಶಿವನಿಗೆ ಅಭಿಷೇಕ ಮಾಡಲು ಯಾವ ಯಾವ ವಸ್ತುಗಳನ್ನು ಉಪಯೋಗಿಸಬೇಕು? ಬೇಡ ಕುರಿತು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಮಹಾ ಶಿವರಾತ್ರಿ ಹಿಂದೂಗಳ ಪಾಲಿಗೆ ಅತಿದೊಡ್ಡ ಹಬ್ಬ. ಅದರಲ್ಲಂತು ಶಿವನ ಆರಾಧಕರಿಗೆ ಬಹಳ ವಿಶೇಷವಾಗಿದೆ. ಈ ದಿನ ಶಿವನಿಗೆ ವಿಶೇಷ ಅಭಿಷೇಕ, ಪೂಜೆ ಮಾಡಲಾಗುತ್ತದೆ. ಈ ಹಬ್ಬವನ್ನು ಭಾರತದ ಅನೇಕ ಭಾಗಗಳಲ್ಲಿ ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.ಶಿವರಾತ್ರಿಯಂದು ಜನರು ಉಪವಾಸ, ಜಾಗರಣೆ ಮಾಡುವ ಮೂಲಕ ಶಿವನನ್ನು ಒಲಿಸಿಕೊಳ್ಳುತ್ತಾರೆ. ಶಿವ ಪುರಾಣದಲ್ಲಿ ಭೋಲೆನಾಥನ ಆರಾಧನೆಗೆ ಸಂಬಂಧಿಸಿದಂತೆ ಕೆಲವು ವಿಶೇಷ ನಿಯಮಗಳನ್ನು ರೂಪಿಸಲಾಗಿದೆ. ಆದ್ದರಿಂದ ಆ ದಿನ ನೀವು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಮಹಾಶಿವರಾತ್ರಿಯಂದು ಮಹಾದೇವ ಮತ್ತು ಪಾರ್ವತಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ದಿನ ಹೆಚ್ಚಿನ ಸಂಖ್ಯೆಯ ಭಕ್ತರು ಶಿವನ ಆಶೀರ್ವಾದವನ್ನು ಪಡೆಯಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಶಿವನನ್ನು ಮೆಚ್ಚಿಸಲು ವಿವಿಧ ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸುತ್ತಾರೆ. ಶಿವ ಅಭಿಷೇಕ ಪ್ರಿಯ. ಹೀಗಾಗಿ ಆತನಿಗೆ ವಿಶೇಷವಾಗಿ ಅಭಿಷೇಕ ಮಾಡುವ ಮೂಲಕ ಸಂತೃಪ್ತಿಪಡಿಸಲಾಗುತ್ತದೆ. ಅರ್ಧನಾರೇಶ್ವರನಿಗೆ ಕೆಲವು ವಿಶೇಷ ವಸ್ತುಗಳಿಂದ ಅಭಿಷೇಕ ಮಾಡಿದರೆ ಏನು ಶುಭವಾಗುತ್ತದೆ? ಮುಖ್ಯವಾಗಿ ಶಿವನಿಗೆ ಅಭಿಷೇಕ ಮಾಡಲು ಯಾವ ಯಾವ ವಸ್ತುಗಳನ್ನು ಉಪಯೋಗಿಸಬೇಕು? ಬೇಡ ಕುರಿತು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

Published on: Mar 07, 2024 07:00 AM