10 ರನ್ಗಳ ಅವಶ್ಯಕತೆ, ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮಧುಶಂಕ
Dilshan Madushanka: 50ನೇ ಓವರ್ ಎಸೆದ ದಿಲ್ಶನ್ ಮಧುಶಂಕ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು. 50ನೇ ಓವರ್ನ ಮೊದಲ ಎಸೆತದಲ್ಲೇ ಸಿಕಂದರ್ ರಾಝ (92) ಅವರನ್ನು ಬೌಲ್ಡ್ ಮಾಡಿದರು. ಇನ್ನು ದ್ವಿತೀಯ ಎಸೆತದಲ್ಲಿ ಬ್ರಾಡ್ ಇವನ್ಸ್ (0) ವಿಕೆಟ್ ಪಡೆದರು. ಹಾಗೆಯೇ ಮೂರನೇ ಎಸೆತದಲ್ಲಿ ರಿಚರ್ಡ್ ನ್ಗರಾವ (0) ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.
ಹರಾರೆಯಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಎಡಗೈ ವೇಗಿ ದಿಲ್ಶನ್ ಮಧುಶಂಕ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡರ ಪಾತುಮ್ ನಿಸ್ಸಂಕಾ 76 ರನ್ ಬಾರಿಸಿದರೆ, ಜನಿತ್ ಲಿಯಾನಾಗೆ 70 ರನ್ ಗಳಿಸಿದರು. ಇನ್ನು ಕಮಿಂದು ಮೆಂಡಿಸ್ 57 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಶ್ರೀಲಂಕಾ ತಂಡವು 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಝಿಂಬಾಬ್ವೆ ತಂಡವು 49 ಓವರ್ಗಳ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 289 ರನ್ ಕಲೆಹಾಕಿದ್ದರು. ಅದರಂತೆ ಕೊನೆಯ ಓವರ್ನಲ್ಲಿ ಕೇವಲ 10 ರನ್ಗಳ ಅವಶ್ಯಕತೆಯಿತ್ತು. ಅತ್ತ ಕ್ರೀಸ್ನಲ್ಲಿ ಸಿಕಂದರ್ ರಾಝ ಇದ್ದ ಕಾರಣ ಝಿಂಬಾಬ್ವೆ ತಂಡದ ಗೆಲುವನ್ನು ನಿರೀಕ್ಷಿಸಲಾಗಿತ್ತು.
ಆದರೆ 50ನೇ ಓವರ್ ಎಸೆದ ದಿಲ್ಶನ್ ಮಧುಶಂಕ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು. 50ನೇ ಓವರ್ನ ಮೊದಲ ಎಸೆತದಲ್ಲೇ ಸಿಕಂದರ್ ರಾಝ (92) ಅವರನ್ನು ಬೌಲ್ಡ್ ಮಾಡಿದರು. ಇನ್ನು ದ್ವಿತೀಯ ಎಸೆತದಲ್ಲಿ ಬ್ರಾಡ್ ಇವನ್ಸ್ (0) ವಿಕೆಟ್ ಪಡೆದರು. ಹಾಗೆಯೇ ಮೂರನೇ ಎಸೆತದಲ್ಲಿ ರಿಚರ್ಡ್ ನ್ಗರಾವ (0) ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.
ಈ ಹ್ಯಾಟ್ರಿಕ್ ವಿಕೆಟ್ನೊಂದಿಗೆ ದಿಲ್ಶನ್ ಮಧುಶಂಕ ಅಂತಿಮ ಓವರ್ನಲ್ಲಿ ನೀಡಿದ್ದು ಕೇವಲ 2 ರನ್ಗಳು ಮಾತ್ರ. ಈ ಮೂಲಕ ರಣರೋಚಕ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ 7 ರನ್ಗಳ ರೋಚಕ ಜಯ ತಂದುಕೊಡುವಲ್ಲಿ ಮಧುಶಂಕ ಯಶಸ್ವಿಯಾದರು.
ಇನ್ನು ಮೂರು ವಿಕೆಟ್ನೊಂದಿಗೆ ಶ್ರೀಲಂಕಾ ಪರ ಏಕದಿನ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ 8ನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ಸಾಧನೆ ಮಾಡಿದ ಬೌಲರ್ಗಳ ಪಟ್ಟಿ ಈ ಕೆಳಗಿನಂತಿದೆ…
-
ಚಾಮಿಂಡ ವಾಸ್ vs ಝಿಂಬಾಬ್ವೆ (2001) & ಬಾಂಗ್ಲಾದೇಶ್ (2003)
-
ಲಸಿತ್ ಮಾಲಿಂಗ vs ಸೌತ್ ಆಫ್ರಿಕಾ (2007), ಕೀನ್ಯಾ (2011) ಮತ್ತು ಆಸ್ಟ್ರೇಲಿಯಾ (2011)
-
ಫರ್ವೇಝ್ ಮಹರೂಫ್ vs ಭಾರತ (2010)
-
ತಿಸಾರ ಪೆರೇರಾ vs ಪಾಕಿಸ್ತಾನ್ (2012)
-
ವನಿಂದು ಹಸರಂಗ vs ಝಿಂಬಾಬ್ವೆ (2017)
-
ಶೆಹನ್ ಮಧುಶಂಕ vs ಬಾಂಗ್ಲಾದೇಶ್ (2018)
-
ಮಹೇಶ್ ತೀಕ್ಷಣ vs ನ್ಯೂಝಿಲೆಂಡ್ (2025)
-
ದಿಲ್ಶನ್ ಮಧುಶಂಕ vs ಝಿಂಬಾಬ್ವೆ (2025)

