‘ಇಂಥ ಸಿನಿಮಾ ಮಾಡುವಾಗ ಎರಡು ಗುಂಡಿಗೆ ಬೇಕು, ಅವರಿಗೆ ಮೂರಿದೆ’; ದಿನಕರ್ ತೂಗುದೀಪ್
ಈ ಕಾರ್ಯಕ್ರಮ ಸ್ಟಾರ್ಗಳ ಸಮಾಗಮನಕ್ಕೆ ಸಾಕ್ಷಿ ಆಗಿತ್ತು. ಶಿವರಾಜ್ಕುಮಾರ್, ಅವರ ಸಹೋದರ, ನಟ ಪುನೀತ್ ರಾಜ್ಕುಮಾರ್, ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ, ನಟ, ನಿರ್ಮಾಪಕ ರಿಷಬ್ ಶೆಟ್ಟಿ ಮೊದಲಾದವರು ಆಗಮಿಸಿದ್ದರು.
ಫ್ಯಾಂಟಸಿ ಸಿನಿಮಾಗಳನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂದು ಹೇಳೋದು ಕಷ್ಟಸಾಧ್ಯ. ಈ ರೀತಿಯ ಸಿನಿಮಾಗಳನ್ನು ಮಾಡೋದು ದೊಡ್ಡ ರಿಸ್ಕ್ನ ಕೆಲಸ. ಏಕೆಂದರೆ, ಇದಕ್ಕೆ ಬಜೆಟ್ ಕೂಡ ದೊಡ್ಡ ಮಟ್ಟದಲ್ಲೇ ಬೇಕು. ನಿರ್ಮಾಪಕರಾದ ನಾಗೇಂದ್ರ ಹಾಗೂ ಭೋಗೇಂದ್ರ ಇಂತಹ ರಿಸ್ಕ್ ತೆಗೆದುಕೊಂಡು ‘ಭಜರಂಗಿ 2’ ಸಿನಿಮಾ ಮಾಡಿದ್ದಾರೆ. ಇದರ ಪ್ರೀ ರಿಲೀಸ್ ಕಾರ್ಯಕ್ರಮ ಅಕ್ಟೋಬರ್ 26ರಂದು ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ದಿನಕರ್ ತೂಗುದೀಪ್ ಅವರು ಭಾಗಿಯಾಗಿದ್ದರು. ಅವರು ಈ ಸಿನಿಮಾ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮ ಸ್ಟಾರ್ಗಳ ಸಮಾಗಮನಕ್ಕೆ ಸಾಕ್ಷಿ ಆಗಿತ್ತು. ಶಿವರಾಜ್ಕುಮಾರ್, ಅವರ ಸಹೋದರ, ನಟ ಪುನೀತ್ ರಾಜ್ಕುಮಾರ್, ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ, ನಟ, ನಿರ್ಮಾಪಕ ರಿಷಬ್ ಶೆಟ್ಟಿ, ನಿರ್ದೇಶಕ ಸಂತೋಷ್ ಆನಂದ್ ರಾಮ್, ‘ಭಜರಂಗಿ 2’ ನಿರ್ದೇಶಕ ಎ. ಹರ್ಷ, ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ಆಗಮಿಸಿದ್ದರು.
ಇದನ್ನೂ ಓದಿ: ‘ಓವರ್ ಆ್ಯಕ್ಟಿಂಗ್ ಬೇಡ’; ವೇದಿಕೆ ಮೇಲೆಯೇ ಶಿವರಾಜ್ಕುಮಾರ್ ವಾರ್ನಿಂಗ್